ಕಾಸರಗೋಡು: ಇಂದಿನಿಂದ ನಡೆಸಲುದ್ದೇಶಿಸಿದ್ದ ಖಾಸಗಿ ಬಸ್ ಮುಷ್ಕರವನ್ನು ಮಾಲಕರು ಹಿಂತೆಗೆದಿದ್ದಾರೆ. ಸಾರಿಗೆ ಸಚಿವ ಸಿ.ಪಿ. ಜೋನ್ರೊಂದಿಗೆ ನಡೆಸಿದ ನಿರ್ಣಾಯಕ ಚರ್ಚೆಯ ಹಿನ್ನೆಲೆಯಲ್ಲ್ಲಿ ಮುಷ್ಕರ ಹಿಂತೆಗೆಯಲು ತೀರ್ಮಾನಿಸಲಾಗಿದೆ. ಬೇಡಿಕೆಗಳನ್ನು ಪರಿಗಣಿಸುವ ಭರವಸೆ ಸಚಿವರು ನೀಡಿದ್ದಾರೆ. ಖಾಸಗಿ ಬಸ್ಗಳನ್ನು ಸರಕಾರ ಲೀಸ್ಗೆ ಪಡೆದುಕೊಂಡು ಬಸ್ಗಳ ಸಮಯ ಕ್ರಮವನ್ನು ಆಲೋಚಿತವಾಗಿ ಪರಿಷ್ಕರಿಸುವುದು ಸಹಿತದ ಬೇಡಿಕೆಗಳನ್ನು ಅಂಗೀಕರಿಸಲಾಗಿದೆ. ಇದೇ ವೇಳೆ ಬಸ್ ಟಿಕೆಟ್ ದರ ಹೆಚ್ಚಿಸುವ ವಿಷಯದಲ್ಲಿ ಹಾಗೂ ರಿಯಾಯಿತಿ ದರ ಹೆಚ್ಚಿಸುವ ವಿಷಯದಲ್ಲಿ ತೀರ್ಮಾನವಾಗಿಲ್ಲ.







