ಬೆಳ್ಳೂರು: ಅಗತ್ಯದಷ್ಟು ನೀರು ಲಭಿಸುವ ಕೊಳವೆಬಾವಿ, ಕೆರೆ ಮೊದಲಾದವುಗಳಿರುವ ಸ್ಥಳದಲ್ಲಿ ಇದೀಗ ಮತ್ತೆ ಮೂರು ಕೊಳವೆಬಾ ವಿಗಳನ್ನು ನಿರ್ಮಿಸಿದ ಬಗ್ಗೆ ದೂರುಂ ಟಾಗಿದೆ. ಬೆಳ್ಳೂರು ಪಂಚಾಯತ್ ೨ನೇ ವಾರ್ಡ್ನ ಬಜ ಎಂಬಲ್ಲಿ ಮತ್ತೆ ಕೊಳವೆಬಾವಿ ನಿರ್ಮಿಸುವ ಮೂಲಕ ಭೂಗರ್ಭ ಜಲದ ಅನಿಯಂತ್ರಿತ ಶೋಷಣೆ ನಡೆದಿರುವುದಾಗಿ ನಾಗರಿಕರು ದೂರುತ್ತಿದ್ದಾರೆ.
ಕರ್ನಾಟಕನಿವಾಸಿಯಾದ ಓರ್ವ ಇಲ್ಲಿ ೧೨ ಎಕ್ರೆ ಸ್ಥಳ ಖರೀದಿ ಸಿದ್ದನು. ಆ ಸ್ಥಳದಲ್ಲಿ ಧಾರಾಳ ನೀರು ಲಭಿಸುವ ಕೊಳವೆಬಾವಿ, ಕೆರೆ ಮೊದ ಲಾದ ವುಗಳು ಇವೆ. ಈ ಸ್ಥಳ ಖರೀ ದಿಸಿದ ವ್ಯಕ್ತಿ ನಿನ್ನೆ ಇಲ್ಲಿಗೆ ಕರ್ನಾ ಟಕದಿಂದ ಎರಡು ಕೊಳವೆಬಾವಿ ನಿರ್ಮಾಣ ಯಂತ್ರಗಳ ಸಹಿತ ತಲುಪಿದ್ದು, ಸ್ಥಳದ ವಿವಿಧೆಡೆಗಳಲ್ಲಿ ಎರಡು ಕೊಳವೆ ಬಾವಿಗಳನ್ನು ತೋಡಲಾಗಿದೆ. ಎರಡರಲ್ಲೂ ಧಾರಾಳ ನೀರು ಲಭಿಸಿ ದೆ. ಅನಂತರ ಮೂರನೇ ಕೊಳವೆ ಬಾವಿ ತೋಡಲು ಪ್ರಯತ್ನ ನಡೆದುದರಿಂದ ನಾಗರಿಕರು ಅಲ್ಲಿಗೆ ತಲುಪಿ ಕೊಳವೆಬಾವಿ ತೋಡುವ ದೃಶ್ಯಗಳನ್ನು ಸಂಗ್ರಹಿಸಿ ಜಿಲ್ಲಾಧಿಕಾರಿಗೆ ಕಳುಹಿಸಿಕೊಟ್ಟಿದ್ದಾರೆ. ಅಷ್ಟರಲ್ಲಿ ಬೋರ್ವೆಲ್ ಲಾರಿಗಳೊಂದಿಗೆ ತಂಡ ಕರ್ನಾಟಕಕ್ಕೆ ಮರಳಿದೆಯೆಂದು ಹೇಳಲಾಗುತ್ತಿದೆ.
ಭೂಗರ್ಭ ಜಲಶೋಷಣೆ ನಡೆಸಿ ಮಾರಾಟ ನಡೆಸುವ ಸಂಸ್ಥೆ ಇಲ್ಲಿ ಆರಂಭಿಸಲು ಕೊಳವೆ ಬಾವಿಗಳನ್ನು ತೋಡಿರುವುದಾಗಿ ನಾಗರಿಕರು ಆರೋಪಿಸುತ್ತಿದ್ದಾರೆ. ಇದು ಈ ಪ್ರದೇಶದಲ್ಲಿ ಕುಡಿಯುವ ನೀರಿನ ಕ್ಷಾಮ ತಲೆದೋರಲು ಕಾರಣವಾಗಲಿ ದೆಯೆಂದು ನಾಗರಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಘಟನೆ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ನಾಗರಿಕರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಜನಸಾಮಾನ್ಯರು ಕುಡಿಯುವ ನೀರಿಗಾಗಿ ಕೊಳವೆಬಾವಿ ತೋಡಬೇಕಾದರೆ ಜಿಯೋಲಜಿ, ಕಂದಾಯ, ಪೊಲೀಸರ ಅನುಮತಿ ಪಡೆಯಬೇಕಾಗಿದ್ದು, ಆದರೆ ಒಂದೇ ಸ್ಥಳದಲ್ಲಿ ಹಲವು ಕೊಳವೆಬಾವಿ ತೋಡುವಾಗ ಅದಕ್ಕೆ ಅನುಮತಿ ನೀಡಿದ ವರು ಯಾರು? ಹೇಗೆ ಅನುಮತಿ ನೀಡ ಲಾಗಿದೆಯೆಂದು ತನಿಖೆ ನಡೆಸಬೇಕೆಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.






