ಪೈವಳಿಕೆ: ಪೈವಳಿಕೆ ಗಾಳಿಯಡ್ಕದ ಮುಹಮ್ಮದ್ ಆಸಿಫ್ (25)ರ ಮೃತದೇಹ 2025 ಜನವರಿ 15ರಂದು ಮುಂಜಾನೆ ಪೈವಳಿಕೆ ಕಾಯರ್‌ಕಟ್ಟೆ ರಸ್ತೆ ಬದಿ ಟಿಪ್ಪರ್ ಲಾರಿಯಲ್ಲಿ ಪತ್ತೆಯಾದ ಘಟನೆ ಕುರಿತು ಸಮಗ್ರ ತನಿಖೆ ನಡೆಸು ವಂತೆ ಗೃಹ ಸಚಿವ ರಮೇಶ್ ಚೆನ್ನಿತ್ತಲ ಕಣ್ಣೂರು ಕ್ರೈಂ ಬ್ರಾಂಚ್ ಎಸ್‌ಪಿಗೆ ನಿರ್ದೇಶಿಸಿದ್ದಾರೆ. ಇದಕ್ಕಾಗಿ ಎಸ್‌ಪಿ ನೇತೃತ್ವದಲ್ಲಿ ಪ್ರತ್ಯೇಕ ತನಿಖಾ ತಂಡ ವನ್ನು ನೇಮಿಸಿದ್ದು ಈ ತಂಡ ನಿನ್ನೆ ಪೈವಳಿಕೆ ದೇವಕಾನ ಬಳಿಯ ಮುಹ ಮ್ಮದ್ ಆಸಿಫ್‌ರ ಮನೆಗೆ ತಲುಪಿ ಮನೆಯವರಿಂದ ಹೇಳಿಕೆ, ಅವರ ಸಂಶಯಗಳನ್ನು ದಾಖಲಿಸಿಕೊಂಡಿದೆ.
ಸಿಪಿಎಂನ ಸಕ್ರಿಯ ಕಾರ್ಯಕರ್ತ ನಾಗಿದ್ದ ಮುಹಮ್ಮದ್ ಆಸಿಫ್‌ರ ನಿಗೂಢ ಸಾವಿನ ಕುರಿತು ತನಿಖೆ ನಡೆಸ ಬೇಕೆಂದು ಅಂದು ಮುಖ್ಯಮಂತ್ರಿ ಯಾಗಿದ್ದ ಪಿಣರಾಯಿ ವಿಜಯನ್‌ರೊಂದಿಗ ಕುಟುಂಬ ವಿನಂತಿಸಿತ್ತು. ಲೋಕಲ್ ಪೊಲೀಸ್ ಹಾಗೂ ಕ್ರೈಂ ಬ್ರಾಂಚ್ ತನಿಖೆ ನಡೆಸಿದರೂ ಪ್ರಕರಣ ದಲ್ಲಿ ಯಾವುದೇ ಮಾಹಿತಿ ಸಂಗ್ರಹಿ ಸುವಲ್ಲಿ ಅಧಿಕಾರಿಗಳು ಪರಾಭವಗೊಂಡಿ ದ್ದರು.
ಕಳೆದ ವಿಧಾನಸಭಾ ಚುನಾ ವಣೆಯಲ್ಲಿ ಯುಡಿಎಫ್ ಪ್ರಚಾರಕ್ಕಾಗಿ ತಲುಪಿದ ಡಿಸಿಸಿ ಪ್ರಧಾನ ಕಾರ್ಯ ದರ್ಶಿ, ಜಿಲ್ಲಾ ಪಂ.ಸದಸ್ಯರಾದ ಸೋಮಶೇಖರ ಶೇಣಿ ಅವರೊಂದಿಗೆ ಈ ಪ್ರಕರಣದ ತನಿಖೆ ನಡೆಸಿ ಆಸಿಫ್‌ರ ಸಾವಿಗೆ ಕಾರಣಕರ್ತರಾದವರನ್ನು ಪತ್ತೆ ಹಚ್ಚಿ ನ್ಯಾಯಯುತವಾಗಿ ಶಿಕ್ಷಿಸ ಬೇಕೆಂದು ಮನೆಯವರು ವಿನಂತಿಸಿದ್ದರು. ಚುನಾವಣೆಯಲ್ಲಿ ಯುಡಿಎಫ್ ಗೆಲುವು ಸಾಧಿಸಿದರೆ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚುವು ದಾಗಿ ಸೋಮಶೇಖರ ಅವರು ಮುಹಮ್ಮದ್‌ಆಸಿಫ್‌ರ ಕುಟುಂಬಕ್ಕೆ ಭರವಸೆ ನೀಡಿದ್ದರು. ಅದರಂತೆ ಸೋಮಶೇಖರ ಗೃಹಖಾತೆ ಸಚಿವ ರಮೇಶ್ ಚೆನ್ನಿತ್ತಲರನ್ನು ನೇರವಾಗಿ ಭೇಟಿಯಾಗಿ ಮನವಿ ಸಲ್ಲಿಸಿದ ಹಿನ್ನೆಲೆ ಯಲ್ಲಿ ಕ್ರೈಂಬ್ರಾಂಚ್‌ನ ಪ್ರತ್ಯೇಕ ತಂಡಕ್ಕೆ ತನಿಖೆಯ ಹೊಣೆಗಾರಿಕೆ ವಹಿಸಿ ಕೊಡಲಾಗಿದೆ.
2025 ಜನವರಿ 15ರಂದು ಮುಂಜಾನೆ ಕಾಯರ್‌ಕಟ್ಟೆ ರಸ್ತೆ ಬದಿ ಟಿಪ್ಪರ್ ಲಾರಿಯೊಳಗೆ ಮುಹಮ್ಮದ್ ಆಸಿಫ್ ಸಂಶಯಾಸ್ಪದ ರೀತಿಯಲ್ಲಿ ಗಂ ಭೀರ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಅವರನ್ನು ಕುಂಬಳೆಯ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಸಾವಿಗೀಡಾಗುವ ೩ ಗಂಟೆಗಳ ಮೊದಲು ಟಿಪ್ಪರ್ ಲಾರಿ ಯೊಂದಿಗೆ ಮುಹಮ್ಮದ್‌ಆಸಿಫ್ ಮನೆಯಿಂದ ತೆರಳಿದ್ದರೆಂದು ಹೇಳಲಾಗು ತ್ತಿದೆ. ಈ ಘಟನೆ ನಡೆದು ಒಂದೂವರೆ ವರ್ಷ ಕಳೆದರೂ ಸ್ವಂತ ಪಕ್ಷದ ಆಡಳಿ ತದಿಂದ ತಮಗೆ ನ್ಯಾಯ ಲಭಿಸಿಲ್ಲವೆಂದು ಆದ್ದರಿಂದ ನ್ಯಾಯ ದೊರಕಿಸಿಕೊಡಲು ಸಹಾಯ ಮಾಡಬೇಕೆಂದು ಮುಹ ಮ್ಮದ್ ಆಸಿಫ್‌ರ
ಕುಟುಂಬ ಸೋಮಸೇಖರರೊಂದಿಗೆ ವಿನಂತಿಸಿತ್ತು. ಮಧ್ಯರಾತ್ರಿ ವೇಳೆ ಟಿಪ್ಪರ್ ಲಾರಿಯಲ್ಲಿ ಹೋದ ಮುಹಮ್ಮದ್‌ಆಸಿಫ್ ಮನೆಯಿಂದ ಮೂರು ಕಿಲೋ ಮೀಟರ್ ದೂರದಲ್ಲಿ ಟಿಪ್ಪರ್ ಲಾರಿಯೊಳಗೆ ಸಾವಿಗೀಡಾದ ಘಟನೆ ಕುರಿತು ತನಿಖೆ ನಡೆಸಬೇಕೆಂದು ವಿನಂತಿಸಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೂ ಮನೆಯವರು ದೂರು ನೀಡಿದ್ದರು. ಮುಹಮ್ಮದ್ ಆಸಿಫ್‌ರ ದೇಹದಲ್ಲಿ ಹಲ್ಲೆಗೈದ ಗಾಯಗಳಿದ್ದುದಾಗಿಯೂ ಹಲ್ಲೆಯಿಂದ ಸಾವುಂಟಾಗಿದೆಯೆಂದು ಮೃತದೇಹದ ಮರಣೋತ್ತರ ಪರೀಕ್ಷಾ ವರದಿಯಲ್ಲಿ ತಿಳಿಸಲಾಗಿತ್ತೆಂದು ಹೇಳಲಾಗುತ್ತಿದೆ. ಮೃತದೇಹದ ಬಳಿ ದೊಣ್ಣೆ ಹಾಗೂ ಲಾರಿಯಲ್ಲಿ ರಕ್ತದ ಕಲೆಗಳು ಕಂಡುಬಂದಿತ್ತು. ಮುಹಮ್ಮದ್ ಆಸಿಫ್‌ರ ನಿಗೂಢ ಸಾವು ನಾಡಿನಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿತ್ತು.






