ಅಂಗಡಿಗೆ ತೆರಳುತ್ತಿದ್ದ 51ರ ಹರೆಯದ ಮಹಿಳೆಯ ಮಾನಭಂಗ: 45ರ ಹರೆಯದ ಯುವಕನ ವಿರುದ್ಧ ಕೇಸು

ಕಾಸರಗೋಡು: ಅಂಗಡಿಗೆ ತೆರಳುತ್ತಿದ್ದ ೫೧ರ ಹರೆಯದ ಮಹಿಳೆಯನ್ನು ಬಲವಂತವಾಗಿ ಹಿಡಿದುಕೊಂಡು ಹೋಗಿ ಮಾನಭಂಗಗೈದಿರುವುದಾಗಿ ದೂರಲಾಗಿದೆ. ಘಟನೆಯಲ್ಲಿ ಮಜೀದ್ (45) ಎಂಬಾತನ ವಿರುದ್ಧ ಕುಂಬಳೆ ಪೊಲೀಸರು ಮಾನಭಂಗಕ್ಕೆ ಕೇಸು ದಾಖಲಿಸಿದ್ದಾರೆ. ಆದಿತ್ಯವಾರ ರಾತ್ರಿ 8 ಗಂಟೆಗೆ ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಸ್ಥಳವೊಂದರಲ್ಲಿ ಪ್ರಕರಣಕ್ಕೆ ಆಸ್ಪದವಾದ ಘಟನೆ ನಡೆದಿದೆ. ಅಂಗಡಿಗೆ ಒಂಟಿಯಾಗಿ ಮಹಿಳೆ ನಡೆದುಹೋಗುತ್ತಿದ್ದರು. ಈ ಮಧ್ಯೆ ಸ್ಥಳಕ್ಕೆ ತಲುಪಿದ ಮಜೀದ್ ಈಕೆಯನ್ನು ಬಲವಂತವಾಗಿ ಹಿಡಿದುಕೊಂಡು ಹೋಗಿ ಮಾನಭಂಗಗೈದಿರು ವುದಾಗಿ ದೂರಲಾಗಿದೆ. ಆರೋಪಿ ಯನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

RELATED NEWS

You cannot copy contents of this page