ಅಂಗನವಾಡಿ ಅಧ್ಯಾಪಿಕೆ  ವಿಷ ಸೇವಿಸಿ  ಮೃತ್ಯು

ಮುಳ್ಳೇರಿಯ: ಅಂಗನವಾಡಿ ಅಧ್ಯಾಪಿಕೆ  ವಿಷ ಸೇವಿಸಿ  ಮೃತಪಟ್ಟ ಘಟನೆ ನಡೆದಿದೆ.  ಬೇಂಗತ್ತಡ್ಕ ನಿವಾಸಿ ಸುಂದರ ಎಂಬವರ ಪತ್ನಿ ಬೇಬಿ (46) ಮೃತಪಟ್ಟ ಅಧ್ಯಾಪಿಕೆ. ಇವರು ಕಾನಕ್ಕೋಡು  ಆಜಾದ್‌ನಗರದಲ್ಲಿ ಅಂಗನವಾಡಿ ಅಧ್ಯಾಪಿಕೆಯಾಗಿದ್ದರು. ನಿನ್ನೆ ಮಧ್ಯಾಹ್ನ  ಇಲ್ಲಿಗೆ ಸಮೀಪ ಪ್ಲಾಂಟೇಶನ್ ಕಾರ್ಪೋರೇಶನ್‌ನ ಗೇರು ತೋಟದಲ್ಲಿ  ವಿಷ ಸೇವಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.   ಕೂಡಲೇ ಮುಳ್ಳೇರಿಯದ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾ ಗಲಿಲ್ಲ. ಮೃತದೇಹವನ್ನು ಕಾಸರ ಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮನೆಗೆ ತಲುಪಿಸಲಾಯಿತು. ಅಲ್ಲಿ ಸಂಬಂಧಿಕರ ಸಹಿತ ಹಲವರು ಅಂತಿಮ ನಮನ ಸಲ್ಲಿಸಿದ ಬಳಿಕ ಮುಳ್ಳೇರಿಯ ಪೂವಡ್ಕದಲ್ಲಿರುವ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.

ಮೃತರು ಪತಿ, ಮಕ್ಕಳಾದ ಸಂದೀಪ್, ಸಂಧ್ಯ, ಸುಜಿತ್, ಅಳಿಯ ರಂಜಿತ್, ಸಹೋದರರಾದ ಮಾಧವ ನೆಲ್ಲಿಕಟ್ಟೆ, ಸುಂದರ ಪಂಜಿಕಲ್ಲು, ಸಹೋದರಿ ಕಮಲ ಅಡ್ಕಾರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page