ಕುಂಬಳೆ: ಪೂರ್ವ ದ್ವೇಷದಿಂದ ನಾಲ್ವರು ಯುವಕರಿಗೆ ಇರಿದು ಗಾಯಗೊ ಳಿಸಿದ ದೂರಿನಂತೆ ಸಹೋದರರಾದ ಇಬ್ಬರ ವಿರುದ್ಧ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಚ್ಲಂಗೋಡು ಪಚ್ಚಂಬಳ ಸಫಾನಗರದ ಶರೀಫ್ ಎಸ್.ಎ. (36) ಪಚ್ಚಂಬಳದ ನವಾಜ್ (30), ಮಹಮ್ಮೂದ್ (30) ಮತ್ತು ರಫೀಕ್ (30) ಎಂಬವರು ಈ ರೀತಿ ಇರಿತಕ್ಕೊಳಗಾಗಿದ್ದು, ಆ ಬಗ್ಗೆ ಗಾಯಗೊಂಡ ಶರೀಫ್ ನೀಡಿದ ದೂರಿ ನಂತೆ ಸಹೋದರರಾದ ಇರ್ಷಾದ್ ಮತ್ತು ದಿಲ್ಶಾದ್ ಎಂಬವರ ವಿರುದ್ಧ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿ ದ್ದಾರೆ. ನವೆಂಬರ್ ೩ರಂದು ರಾತ್ರಿ ೧೧ ಗಂಟೆಗೆ ಇಚ್ಲಂಗೋಡು ಪಚ್ಚಂಬಳ ಸಫಾನಗರದಲ್ಲಿ ನಾನು ಮತ್ತು ನನ್ನ ಸ್ನೇಹಿತರಾದ ರಫೀಕ್, ಮಹಮ್ಮೂದ್ ಮತ್ತು ನವಾಜ್ರನ್ನು ಬೈಕ್ನಲ್ಲಿ ಬಂದ ಆರೋಪಿಗಳಿಬ್ಬರು ತಡೆದು ನಿಲ್ಲಿಸಿ ಚಾಕು ವಿನಿಂದ ಇರಿದು ಗಾಯಗೊಳಿಸಿದರೆಂದು ನಂತರ ತಲ್ವಾರ್ ಬೀಸಿ ಕೊಲೆ ಬೆದರಿಕೆ ಒಡ್ಡಿದರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಶರೀಫ್ ಆರೋಪಿಸಿದ್ದಾರೆ.






