ವಿದ್ಯಾರ್ಥಿನಿಯರು ಸಂಚರಿಸಿದ ಕಾರು ವಿದ್ಯುತ್ ಕಂಬಕ್ಕೆ ಢಿಕ್ಕಿ: ಕಾರಿನ ಮೇಲೆ ಮುರಿದುಬಿದ್ದ ವಿದ್ಯುತ್ ಕಂಬ; ತಪ್ಪಿದ ಭಾರೀ ದುರಂತ

ಕುಂಬಳೆ: ವಿದ್ಯಾರ್ಥಿನಿಯರು ಸಂಚರಿಸಿದ ಕಾರು ನಿಯಂತ್ರಣ ತಪ್ಪಿ  ವಿದ್ಯುತ್  ಕಂಬಕ್ಕೆ ಬಡಿದಿದ್ದು ಅದೃಷ್ಟವಶಾತ್ ಭಾರೀ ದುರಂತವೊಂದು  ತಪ್ಪಿಹೋಗಿದೆ.  ಕಾರಿನಲ್ಲಿದ್ದ ಮೂವರು ಯುವತಿಯರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ನಿನ್ನೆ ಮಧ್ಯಾಹ್ನ ೨.೩೦ರ ವೇಳೆ ಬಂಬ್ರಾಣ ಜಂಕ್ಷನ್‌ನಲ್ಲಿ ಅಪಘಾತ ಸಂಭವಿಸಿದೆ.   ದೇರಳಕಟ್ಟೆ  ಕೆ.ಎಸ್.ಹೆಗ್ಡೆ  ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯರು ಸಂಚರಿಸಿದ ಕಾರು ಅಪಘಾತಕ್ಕೀ ಡಾಗಿದೆ. ಕಳತ್ತೂರಿನಲ್ಲಿ ನಡೆದ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಇವರು ಮರಳುತ್ತಿದ್ದರು. ಕಾರು ಬಂಬ್ರಾಣ ಜಂಕ್ಷನ್‌ಗೆ ತಲುಪಿದಾಗ  ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ಆಘಾತದಿಂದ ಕಂಬ ಮುರಿದು  ಕಾರಿನ ಮೇಲೆ ಬಿದ್ದಿದೆ.  ವಿದ್ಯುತ್ ಪ್ರವಾಹವಿದ್ದ ಎಚ್‌ಟಿ ಲೈನ್‌ಗಳು  ನೆಲಕ್ಕಪ್ಪಳಿಸಿದ್ದು ಈ ಹೊತ್ತಿನಲ್ಲಿ  ರಸ್ತೆಯಲ್ಲಿ ವಾಹನಗಳು, ಜನಸಂಚಾರವಿಲ್ಲದುದರಿಂದ ಭಾರೀ ದೊಡ್ಡ ದುರಂತ ತಪ್ಪಿಹೋಗಿದೆ. ವಿಷಯ ತಿಳಿದು ತಲುಪಿದ ಕೆಎಸ್‌ಇಬಿ ನೌಕರರು ವಿದ್ಯುತ್ ಸಂಪರ್ಕ ವಿಚ್ಛೇಧಿಸಿದ ಬಳಿಕ ಕಾರಿನಲ್ಲಿದ್ದವರಿಗೆ ಹೊರಗೆ ಬರಲು ಸಾಧ್ಯವಾಯಿತು.   ಸಣ್ಣಪುಟ್ಟ ಗಾಯಗೊಂಡ ಇವರು ಕುಂಬಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.

RELATED NEWS

You cannot copy contents of this page