ಪೈವಳಿಕೆ: ಕಯ್ಯಾರು ವಿಲ್ಲೇ ಜ್‌ನ ಜೋಡುಕಲ್‌ನ ವಿವಾದ ಸ್ಥಳದಲ್ಲಿ ನಿರ್ಮಾಣ ಚಟುವಟಿಕೆ ನಡೆಸಿರುವುದಾಗಿ ದೂರಲಾಗಿದೆ. ಕಾಸರಗೋಡು ಲೋಕೋಪ ಯೋಗಿ ರಸ್ತೆ ಸೆಕ್ಷನ್ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ನೀಡಿದ ದೂರಿನ ಪ್ರಕಾರ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಜೋಡುಕಲ್ಲು ಸೇವಾ ಭಾರತಿ ಕ್ಲಬ್ ಕಾರ್ಯ ದರ್ಶಿ, ಅಧ್ಯಕ್ಷ, ಎಕ್ಸಿಕ್ಯೂಟಿವ್ ಸಮಿತಿ ಸದಸ್ಯರು ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ.
ರಸ್ತೆ ಬದಿಯ ಭೂಮಿ ಸ್ವಾಧೀ ನಪಡಿಸಿ ನಿರ್ಮಾಣ ಚಟುವಟಿಕೆ ನಡೆಸಿದ ಸ್ಥಳದಲ್ಲಿ ಇಲಾಖೆಯ ಮುನ್ನೆಚ್ಚರಿಕೆಯನ್ನು ಅವಗಣಿಸಿ ಮತ್ತೆ ಒಂದು ವೇದಿಕೆಯನ್ನು ನಿರ್ಮಿಸಿ ರುವುದು, ಕಾರ್ಯಕ್ರಮಗಳನ್ನು ನಡೆಸಿರುವುದಾಗಿ ಮಂಜೇಶ್ವರ ಪೊಲೀಸರು ನೋಂದಾಯಿಸಿದ ದೂರಿನಲ್ಲಿ ಹೇಳಲಾಗಿದೆ.






