ಕುಂಬಳೆ: ಕಾಡುಹಂದಿ ರಸ್ತೆಯಲ್ಲಿ ಅಡ್ಡ ಓಡಿದ ಪರಿಣಾಮ ನಿಯಂತ್ರಣ ತಪ್ಪಿದ ಬೈಕ್ ಮಗುಚಿಬಿದ್ದು ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಆಟೋ ಚಾಲಕ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಮೊಗ್ರಾಲ್ ಕಡವತ್ನ ಬಿ.ವಿ. ಅಬ್ದುಲ್ ಕರೀಂ (39) ಮೃತಪಟ್ಟ ದುರ್ದೈವಿ. ಕಳೆದ ಶುಕ್ರವಾರ ಮುಂಜಾನೆ ಕಟ್ಟತ್ತಡ್ಕ ಎಕೆಜಿ ನಗರದಲ್ಲಿ ಅಪಘಾತ ಸಂಭವಿಸಿತ್ತು. ಅಬ್ದುಲ್ ಕರೀಂ ಬೈಕ್ನಲ್ಲಿ ಸಂಚರಿಸುತ್ತಿದ್ದಾಗ ಕಾಡುಹಂದಿಯೊಂದು ರಸ್ತೆಗೆ ಅಡ್ಡವಾಗಿ ಓಡಿದ್ದು ಈ ವೇಳೆ ಹಂದಿಗೆ ಢಿಕ್ಕಿ ಹೊಡೆದ ಬೈಕ್ ಬಳಿಕ ಮಗುಚಿ ಬಿದ್ದಿತ್ತು. ಇದರಿಂದ ಗಂಭೀರ ಗಾಯಗೊಂಡ ಅಬ್ದುಲ್ ಕರೀಂರನ್ನು ಪರಿಯಾರಂನ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ವೇಳೆ ಅವರು ಮೃತಪಟ್ಟರು. ಮರಣೋತ್ತರ ಪರೀಕ್ಷೆ ಬಳಿಕ ಇಂದು ಸಂಜೆ ಮೊಗ್ರಾಲ್ ಕಡಪ್ಪುರಂ ವಲಿಯ ಜುಮಾ ಮಸೀದಿ ಪರಿಸರದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
ಮೊಗ್ರಾಲ್ ಕಡವತ್ ಬೀವಿ ಹೌಸ್ನ ದಿ| ಸೈನುದ್ದೀನ್ ಮುಸ್ಲಿಯಾರ್-ಖದೀಜ ದಂಪತಿ ಪುತ್ರನಾದ ಮೃತರು ಪತ್ನಿ ಸಫಿಯ ಮಣಿಯಂಪಾರೆ, ಸಹೋದರ-ಸಹೋದರಿಯರಾದ ಬಿ.ವಿ. ಅಬ್ದುಲ್ ಹಮೀದ್ ಮೌಲವಿ, ಬಿ.ವಿ.ಎ. ಬಷೀರ್, ಅಬ್ದುಲ್ ಸಲಾಂ ದಾರಿಮಿ, ಬಿ.ಎನ್.ಎ. ಖಾದರ್, ಅಬ್ದುಲ್ ಗಫೂರ್ ಹನೀಫಿ, ನಫೀಸತ್ ಮಿಸ್ರಿಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ನಿಧನಕ್ಕೆ ಸಿಟಿಜನ್ ಕ್ಲಬ್ ಮೊಗ್ರಾಲ್ ಕಡವತ್, ಮೊಗ್ರಾಲ್ ದೇಶೀಯವೇದಿ, ಗ್ರೀನ್ ಸ್ಟಾರ್ ಮೊಗ್ರಾಲ್ ಸಂತಾಪ ಸೂಚಿಸಿವೆ.






