ಮೀಯಪದವು: ಕೇರಳ ಶಾಲಾ ಕಲೋತ್ಸವದ ಅಂಗವಾಗಿ ನಡೆಯುವ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವವನ್ನು ಶಾಸಕ ಎ.ಕೆ.ಎಂ. ಅಶ್ರಫ್ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಉದ್ಯಮಿ ಡಾ. ಸದಾಶಿವ ಶೆಟ್ಟಿ ಕಲೋತ್ಸವದಲ್ಲಿ ವಿಜೇತರಾಗುವ ಮಕ್ಕಳಿಗೆ ನೀಡಲಾಗುವ ಟ್ರೋಫಿಗಳನ್ನು ಪ್ರದರ್ಶಿಸುವ ‘ಟ್ರೋಫಿ ಕಾರ್ನರ್’ ಅನ್ನು ಉದ್ಘಾಟಿಸಿದರು.
ಮೀಂಜ ಪಂಚಾಯತ್ ಅಧ್ಯಕ್ಷ ಸಿ.ಎ.ತಾಜುದ್ದೀನ್ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ನಾರಾಯಣ ದೇಲಂಪಾಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮುಖ್ಯ ಅತಿಥಿಯÁಗಿ ಕ್ಯಾಂಪ್ಕೋ ಅಧ್ಯಕ್ಷ ಸತೀಶ್ಚಂದ್ರ ಎಸ್.ಆರ್. ಭಾಗವಹಿಸಿದ್ದರು. ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹಿಮಾನ್, ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ಹರ್ಷಾದ್ ವರ್ಕಾಡಿ, ರೆವರೆಂಡ್ ಫಾದರ್ ಡೇನಿಯಲ್ ಡಿ’ಸೋಜಾ, ಡಾ. ಜಯಪ್ರಕಾಶ್ ನಾರಾಯಣ, ಶ್ರೀಧರ್ ರಾವ್ ಆರ್.ಎಂ., ಜನರಲ್ ಕನ್ವೀನರ್ ರಮೇಶ್ ಕೆ. ಸೇರಿದಂತೆ ಹಲವು ರಾಜಕೀಯ ಹಾಗೂ ಸಾಮಾಜಿಕ ಗಣ್ಯರು ಉಪಸ್ಥಿತರಿದ್ದರು. ವಿದ್ಯಾವರ್ಧಕ ಎ.ಯು.ಪಿ. ಶಾಲೆಯ ಮುಖ್ಯೋಪಾಧ್ಯಾಯ ಅರವಿಂದಾಕ್ಷ ಭಂಡಾರಿ ಸ್ವಾಗತಿಸಿ, ಸ್ವಾಗತ ಸಮಿತಿಯ ಸಂಚಾಲಕ ರವಿಲೋಚನ ವಂದಿಸಿದರು. ರಾಮಚಂದ್ರ ಮಾಸ್ಟರ್ ನಿರೂಪಿಸಿದರು.






