ಸಾಮಾಜಿಕ ಜಾಲತಾಣ ಮೂಲಕ ಪರಿಚಯಗೊಂಡು ಹಣ ಪಡೆದು ವಂಚನೆ: ವಾಪಸು ಕೇಳಿದಾಗ ಬೆದರಿಸಿದ ಆರೋಪಿ ಸೆರೆ

ತಿರುವನಂತಪುರ: ಪೇಸ್‌ಬುಕ್ ಮೂಲಕ ಪರಿಚಯಗೊಂಡ ಯುವತಿಯಿಂದ ಹಣ ಪಡೆದುಕೊಂಡ ಮಿಮಿಕ್ರಿ ಕಲಾವಿದ ಸೆರೆಯಾಗಿದ್ದಾನೆ. ತೃಶೂರು ಅರನಾಟುಕರ ನಿವಾಸಿ ಸತೀಶ್ ವಳರಿ ಯಾನೆ ವಿ.ಬಿ. ಸತೀಶ್ (೪೭)ನನ್ನು ಬಂಧಿಸಲಾಗಿದೆ. ಈತನ ಸಹೋದರಿ ವಿರುದ್ಧವೂ ಕೇಸು ದಾಖಲಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ವಿಳಿಂಞಂ ಕೋಟಪುರಂ ನಿವಾಸಿಯಾದ ಯುವತಿ ನೀಡಿದ ದೂರಿನಂತೆ ಈತನನ್ನು ಬಂಧಿಸಲಾಗಿದೆ. ಕಳೆದ ಡಿಸೆಂಬರ್‌ನಿಂದ ಫೆಬ್ರವರಿಗಿರುವ ಕಾಲಾವದಿಯಲ್ಲಿ ಹಲವು ಬಾರಿಯಾಗಿ 1.25 ಲಕ್ಷ ರೂ. ಯುಪಿಐ ಮೂಲಕ ಪಡೆದಿರುವುದಾಗಿ ಯುವತಿ ದೂರಿನಲ್ಲಿ ತಿಳಿಸಿದ್ದಾಳೆ. 2೦,3೦೦ ರೂ.ಗಳ ಇಲೆಕ್ಟ್ರಾನಿಕ್ಸ್ ಸಾಮಗ್ರಿಗಳು, ವಿಮಾನ ಟಿಕೆಟ್ ಪಡೆದ ವತಿಯಿಂದ 2೦,4೦೦ರೂ. ಪಡೆದುಕೊಂಡಿರುವು ದಾಗಿಯೂ ಪೊಲೀಸರು ತಿಳಿಸಿದ್ದಾರೆ. ನೀಡಿದ ಹಣವನ್ನು ವಾಪಸು ಕೇಳಿದಾಗ ಮೋರ್ಫ್ ಮಾಡಿದ ಚಿತ್ರಗಳನ್ನು ಸಂಬಂಧಿಕರಿಗೆ ಹಾಗೂ ಕೆಲಸ ಮಾಡುವ ಸಂಸ್ಥೆಗೆ ಕಳುಹಿಸಿ ಕೊಡುವುದಾ ಗಿಯೂ ಬೆದರಿಸಿದ್ದಾನೆಂದು ದೂರಿನಲ್ಲಿ ಹೇಳಲಾಗಿದೆ. ಈತನ ಸಹೋದರಿ ದ್ವಿತೀಯ ಆರೋಪಿಯಾಗಿದ್ದು, ವಾಟ್ಸಪ್‌ನಲ್ಲಿ ಸಂದೇಶ ಕಳುಹಿಸಿ ಬೆದರಿಕೆಯೊಡ್ಡಿರು ವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ನ್ಯಾಯಾ ಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

RELATED NEWS

You cannot copy contents of this page