ಟೆಂಪೋ ಚಾಲಕ ನೇಣುಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಉಪ್ಪಳ: ಟೆಂಪೋ ಚಾಲಕನೋರ್ವ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಕೂಡಲೇ ಆಸ್ಪತ್ರೆಗೆ ತಲುಪಿಸುವಷ್ಟರಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ.  ಹೊಸಂಗಡಿ ಬಳಿಯ ಅಂಗಡಿಪದವು ನಿವಾಸಿಯೂ ಹೊಸಂಗಡಿಯಲ್ಲಿ ಶ್ರೀ ಶಾಸ್ತಾ ಬೇಕರಿ ಮಾಲಕನಾಗಿರುವ  ಸುಂದರ ಬಿ.ಎಂ ಎಂಬವರ ಪುತ್ರ ಮಚ್ಚೇಂದ್ರನಾಥ (48) ಮೃತ ವ್ಯಕ್ತಿ.    ನಿನ್ನೆ ರಾತ್ರಿ  94೦ರ ವೇಳೆ ಘಟನೆ ನಡೆದಿದೆ.  ಮನೆಯ ಕೊಠಡಿಗೆ ತೆರಳಿ  ಬಾಗಿಲು ಹಾಕಿದ್ದ ಮಚ್ಚೇಂದ್ರನಾಥ ದೀರ್ಘ ಹೊತ್ತು ಕಳೆದರೂ ಹೊರಗೆ ಬಾರದ ಹಿನ್ನೆಲೆಯಲ್ಲಿ ಪತ್ನಿ ಕರೆದಾಗ  ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಇದರಿಂದ ಬಾಗಿಲು ತೆರೆಯಲು ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ ವೆನ್ನಲಾಗಿದೆ. ಇದರಿಂದ ಇತರರು ಸೇರಿ ಬಾಗಿಲು ಮುರಿದು ನೋಡಿದಾಗ ಮಚ್ಚೇಂದ್ರನಾಥ ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಕೂಡಲೇ ಅವರನ್ನು ಕೆಳಗಿಳಿಸಿ  ಸ್ಥಳೀಯ ಆಸ್ಪತ್ರೆಗೂ ಬಳಿಕ ಮಂಗಳೂರಿನ ಆಸ್ಪತ್ರೆಗೆ  ಕೊಂಡೊಯ್ದಿದ್ದು ಅಷ್ಟರೊಳಗೆ ನಿಧನ ಸಂಭವಿಸಿದೆ. ಮಚ್ಚೇಂದ್ರನಾಥ ಕೆಲವು ವರ್ಷಗಳಿಂದ ಹೊಸಂಗಡಿಯಲ್ಲಿ ಟೆಂಪೋ ಚಾಲಕನಾಗಿದ್ದರು. ಆತ್ಮಹತ್ಯೆಗೈಯ್ಯಲು ಕಾರಣವೇನೆಂದು ತಿಳಿದುಬಂದಿಲ್ಲ. ಘಟನೆ ಬಗ್ಗೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಮೃತರು ತಂದೆ, ಪತ್ನಿ ಸಂಧ್ಯಾ, ಮಕ್ಕಳಾದ ರಶ್ಮಿ, ರಿತೇಶ್, ಸಹೋದರ ಹರಿಪ್ರಸಾದ್, ಸಹೋದರಿಯರಾದ ಜಯಮಾಲಾ, ಮಲ್ಲಿಕ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮಚ್ಚೇಂದ್ರನಾಥರ ತಾಯಿ ಸತ್ಯವತಿ ಈ ಹಿಂದೆ ನಿಧನರಾಗಿದ್ದಾರೆ.

RELATED NEWS

You cannot copy contents of this page