ಪೋಕ್ಸೋ ಸೇರಿ ಹಲವು ಕ್ರಿಮಿನಲ್ ಪ್ರಕರಣಗಳ ಆರೋಪಿ  ಮೈಸೂರಿನಿಂದ ಸೆರೆ: 26 ಸಿಮ್‌ಕಾರ್ಡ್ ವಶ

ಕಾಸರಗೋಡು: ಪೋಕ್ಸೋ, ದೌರ್ಜನ್ಯ, ವೀಸಾ ವಂಚನೆ ಇತ್ಯಾದಿ ಹಲವು ಪ್ರಕರಣಗಳಲ್ಲಿ ಆರೋಪಿಯಾ ಗಿದ್ದು, ನಂತರ ತಲೆಮರೆಸಿಕೊಂಡಿ ದ್ದಾತನನ್ನು ಮೈಸೂರಿನ ಹುಣಸೂರಿನಲ್ಲಿ ಪೊಲೀಸರು ನಡೆಸಿದ   ಕಾರ್ಯಾಚರಣೆ ಯಲ್ಲಿ ಬಂಧಿಸಿದ್ದಾರೆ. ಚೆರುವತ್ತೂರು ಕಾಡಾಂಗೋಡು ನಿವಾಸಿ ಮುತ್ತಲೀಬ್ ಸಿ.ಎಚ್ (46) ಬಂಧಿತ ಆರೋಪಿ. ಹೊಸದುರ್ಗ ಡಿವೈಎಸ್‌ಪಿ ನೇತೃತ್ವದಲ್ಲಿ ಎಸ್‌ಐ ಸೈಫುದ್ದೀನ್ ನೀಲೇಶ್ವರ, ಸಿವಿಲ್ ಪೊಲೀಸ್ ಆಫೀಸರ್‌ಗಳಾದ ಶ್ರೀಕಾಂತ್ ಅರವಂಚಾಲ್ ಮತ್ತು ವಿ.ವಿ. ಅಜಯನ್‌ರನ್ನೊಳಗೊಂಡ ಪೊಲೀಸರು ನಡೆಸಿದ ಗುಪ್ತ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.

ಆರೋಪಿಯ ಕೈಯಿಂದ 26 ಮೊಬೈಲ್ ಸಿಮ್‌ಗಳನ್ನು ಪತ್ತೆಹಚ್ಚಿ ವಶಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೇರಳದ ವಿವಿಧ ಪೊಲೀಸ್ ಠಾಣೆಗಳಲ್ಲಾಗಿ ದಾಖಲಾಗಿ ರುವ ಅತ್ಯಾಚಾರ, ಪೋಕ್ಸೋ, ವೀಸಾ ವಂಚನೆ, ಮಹಿಳಾ ದೌರ್ಜನ್ಯ, ಹಲ್ಲೆ, ವಂಚನೆ ಇತ್ಯಾದಿ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿತನು ಆರೋ ಪಿಯಾಗಿದ್ದಾನೆ. ಇದರಲ್ಲಿ ಹಲವು ಪ್ರಕರಣಗಳಲ್ಲಿ ಸಂಬಂಧಪಟ್ಟ ವಿಚಾರಣಾ ನ್ಯಾಯಾಲಯಗಳು ಆತನನ್ನು ತಲೆಮರೆಸಿಕೊಂಡಿರುವ ಆರೋಪಿ ಯನ್ನಾಗಿ ಘೋಷಿಸಿದೆ.

ಆಲುವಾ ಈಸ್ಟ್ ಪೊಲೀಸ್ ಠಾಣೆಯಲ್ಲಿ 2019ರಲ್ಲಿ ದಾಖಲಿಸ ಗಿರುವ ಪೋಕ್ಸೋ ಪ್ರಕರಣ ಆಲುವಾ ಪೊಲೀಸ್ ಠಾಣೆಯಲ್ಲಿ ೨೦೧೯ರಂದು ದಾಖಲುಗೊಂಡಿರುವ ಅತ್ಯಾಚಾರ ಪ್ರಕರಣ, ಮಲಪ್ಪುರಂ ಕರುವಾರಕುಂಡ್ ಪೊಲೀಸ್ ಠಾಣೆಯಲ್ಲಿ 2012ರಲ್ಲಿ ದಾಖಲುಗೊಂಡ ಅತ್ಯಾಚಾರ ಪ್ರಕರಣ, ಮಾತ್ರವಲ್ಲದೆ ವಿದ್ಯಾನಗರ, ಕಾಯಂ ಕುಳಂ, ಪಿಣರಾಯಿ, ತಿರುವನಂತಪುರ ಅಟ್ಟಿಂಗಾಲ್ ಮತ್ತು ಪಾಲಕ್ಕಾಡ್ ನೆಮ್ಮಾರ ಪೊಲೀಸ್ ಠಾಣೆಗಳಲ್ಲಿ ದಾಖಲುಗೊಂಡಿರುವ ಹಲವು ಕ್ರಿಮಿನಲ್ ಪ್ರಕರಣಗಳಲ್ಲ್ಲೂ ಬಂಧಿತನು ಆರೋಪಿಯಾಗಿದ್ದಾನೆ. ಇದರ ಹೊರತಾಗಿ ಕರ್ನಾಟಕದ ವಿವಿಧ

RELATED NEWS

You cannot copy contents of this page