ಪೈವಳಿಕೆ: ಮುಸ್ಲಿಂಲೀಗ್ ಕೇರಳ ಮುಖ್ಯಮಂತ್ರಿಯನ್ನು ನಿಯಂತ್ರಿಸುತ್ತಿದ್ದು, ಕೇರಳದಲ್ಲಿ ಹಿಂದೂ ಧಾರ್ಮಿಕತೆಯ ಮೇಲೆ ದಾಳಿ ನಡೆಸುತ್ತಿದೆ. ಜೋಡುಕಲ್ಲಿನಲ್ಲಿ ಇದು ಮತ್ತಷ್ಟು ಸ್ಪಷ್ಟ ಆಗಿದೆ ಎಂದು ಶಾಸಕ ಬಿ.ಬಿ. ಗೋಪಕುಮಾರ್ ನುಡಿದರು. ಜೋಡುಕಲ್ಲು ತಪೋವನ ಗಣೇಶ ಮಂದಿರಕ್ಕೆ ನಿನ್ನೆ ಭೇಟಿ ನೀಡಿ ಅವರು ಮಾತನಾಡುತ್ತಿದ್ದರು. ೪೦ ವರ್ಷಗಳಿಂದ ಗಣೇಶ ಮಂದಿರ, ಶಿಶು ಮಂದಿರ ಇರುವ ಜಾಗವನ್ನು ಕಾನೂನು ಹೆಸರಲ್ಲಿ, ಅಧಿಕಾರದ ಬಲದಲ್ಲಿ ನಿಯಂತ್ರಿಸಲು ಮುಂದಾದರೆ ನೋಡುತ್ತಾ ಇರಲು ಸಾಧ್ಯವಿಲ್ಲ. ಇಲ್ಲಿನ ಸಮಸ್ಯೆಗಳನ್ನು ಮುಖ್ಯಮಂತ್ರಿಯ ಗಮನಕ್ಕೆ ತರಲಾಗುವುದು ಎಂದು ಶಾಸಕರು ನುಡಿದರು.
ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್, ಜಿಲ್ಲಾ ಕಾರ್ಯದರ್ಶಿ ಪಿ.ಆರ್. ಸುನಿಲ್, ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ, ವಿಕ್ರಮ್ ಪೈ, ವಿಜಯ ಕುಮಾರ್ ರೈ, ಎ.ಕೆ. ಕಯ್ಯಾರ್, ಸದಾಶಿವ ಚೇರಾಲ್ ಉಪಸ್ಥಿತರಿದ್ದರು. ಶಿಜು ಸ್ವಾಗತಿಸಿ, ಲೋಕೇಶ್ ನೋಂಡಾ ವಂದಿಸಿದರು.






