ನೀಲೇಶ್ವರ: ನೀಲೇಶ್ವರದಲ್ಲಿ ಎರಡು ರೈಲುಗಳಿಗೆ ನಿಲುಗಡೆ ಮಂಜೂರು ಮಾಡಿರುವುದರ ಬೆನ್ನಲ್ಲೇ ಹಕ್ಕು ಮಂಡಿಸಿ ಸಂಸದ ರಾಜ್ಮೋಹನ್ ಉಣ್ಣಿತ್ತಾನ್ ರಂಗಕ್ಕಿಳಿದರು. ತನ್ನ ಪಾರ್ಲಿಮೆಂಟ್ ಮಂಡಲದ ಏಳು ರೈಲು ನಿಲ್ದಾಣಗಳಲ್ಲಿ ದೀರ್ಘದೂರ ರೈಲುಗಳು ಸಹಿತದ ಹೆಚ್ಚುವರಿ ರೈಲುಗಳಿಗೆ ನಿಲುಗಡೆ ಮಂಜೂರು ಮಾಡಬೇಕೆಂದು ೨೦೦೬ ಮಾರ್ಚ್ ೧ರಂದು ರೈಲ್ವೇ ಬೋರ್ಡ್ ಚೆಯರ್ಮೆನ್ರಲ್ಲಿ ಹಾಗೂ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ರಲ್ಲಿ ಮನವಿ ಮೂಲಕ ಆಗ್ರಹಿಸಿರುವುದಾಗಿಯೂ ಸಾಮಾಜಿಕ ಜಾಲತಾಣಗಳಲ್ಲಿ ಅವರು ಬಹಿರಂಗಪಡಿಸಿದರು. ಹೊಸತಾಗಿ ನಿಲುಗಡೆ ಮಂಜೂರು ಮಾಡಿ ರೈಲ್ವೇ ಹೊರಡಿಸಿದ ಆದೇಶದ ಪ್ರತಿಯನ್ನು ಇದರ ಜೊತೆ ಅವರು ಹಂಚಿಕೊಂಡಿದ್ದಾರೆ.
ಆದರೆ ನೀಲೇಶ್ವರದಲ್ಲಿ ಮಂಗ ಳೂರು- ಚೆನ್ನೈ ಎಕ್ಸ್ಪ್ರೆಸ್ ಹಾಗೂ ಪುಣೆ- ಎರ್ನಾಕುಳಂ ಪೂರ್ಣ ಎಕ್ಸ್ ಪ್ರೆಸ್ಗೆ ನಿಲುಗಡೆ ಮಂಜೂರುಗೊಳಿಸ ಬೇಕೆಂದು ಆಗ್ರಹಿಸಿ ಕೇಂದ್ರ ರೈಲ್ವೇ ಸಚಿವರಿಗೆ ಹಾಗೂ ಕೇರಳದ ಬಿಜೆಪಿ ಮುಖಂಡ ರಾಜ್ಯ ಸಭಾ ಸದಸ್ಯನಾದ ಸಿ. ಸದಾನಂದನ್ ಮಾಸ್ತರ್ರಿಗೆ ೨೦೨೬ ಸೆ. ೧೦ರಂದು, ೨೪ರಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಮನವಿ ನೀಡಿದ್ದರು. ನೀಲೇಶ್ವರದ ಜನರ ಬಹುಕಾಲದ ಬೇಡಿಕೆಯಾಗಿತ್ತೆಂದು ದೀರ್ಘದೂರ ಪ್ರಯಾಣಿಕರಿಗೆ ಇದು ಬಹಳ ಸಹಾಯಕವಾಗಬಹುದೆಂದು ಸೂಚಿಸಿ ಅಶ್ವಿನಿ ಮನವಿ ನೀಡಿದ್ದರು. ಮನವಿಯ ಪ್ರತಿಯನ್ನು ಕಣ್ಣೂರು ನಿವಾಸಿಯಾದ ಸಿ. ಸದಾನಂದನ್ ಮಾಸ್ತರ್ರಿಗೂ ಕಳುಹಿಸಿದ್ದರು. ಆ ಬಗ್ಗೆ ಅವರು ಕೇಂದ್ರ ಸಚಿವರನ್ನು ಹಾಗೂ ರೈಲ್ವೇ ಅಧಿಕಾರಿಗಳನ್ನು ಸತತವಾಗಿ ಸಂಪರ್ಕಿಸಿದ್ದರು. ಇದರಂಗವಾಗಿ ನೀಲೇಶ್ವರ ರೈಲು ನಿಲ್ದಾಣದಲ್ಲಿ ಈ ರೈಲುಗಳಿಗೆ ನಿಲುಗಡೆ ಮಂಜೂರು ಮಾಡಲು ಬೇಕಾದ ಸೌಕರ್ಯಗಳು ಇದೆಯೋ ಎಂದು ಪರಿಶೀಲಿಸಲು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ರೈಲ್ವೇಗೆ ನಿರ್ದೇಶ ನೀಡಿದ್ದರು.
ವರದಿ ಲಭಿಸಿದ ಕೂಡಲೇ ಅನು ಕೂಲ ಕ್ರಮ ಉಂಟಾಗಬಹುದೆಂದು ಅಕ್ಟೋಬರ್ ೨೮ರಂದು ಕೇಂದ್ರ ರೈಲ್ವೇ ಸಚಿವರು ಸದಾನಂದನ್ ಮಾಸ್ತರ್ರಿಗೆ ತಿಳಿಸಿದ್ದರು. ಈ ಉತ್ತರ ಬಿಜೆಪಿ ಮುಖಂಡನಾಗಿರುವ ಸಿ. ಸದಾನಂದನ್ ಮಾಸ್ತರ್ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿಗೆ ಕಳುಹಿಸಿಕೊಟ್ಟಿದ್ದರು. ಅದರ ಬಳಿಕ ಮೊನ್ನೆ ಈ ರೈಲುಗಳಿಗೆ ನೀಲೇಶ್ವರದಲ್ಲಿ ನಿಲುಗಡೆ ಮಂಜೂರು ಮಾಡಿ ರೈಲ್ವೇ ಆದೇಶ ಹೊರಡಿಸಿದೆ.






