ಸಿಟಿ ಗೋಲ್ಡ್ ಕೇವಾ ಬಾಕ್ಸ್ ಶೋರೂಂಗಳು ಲೋಕಾರ್ಪಣೆ

ಉಪ್ಪಳ: ಉಪ್ಪಳದ ಚಿನ್ನಾಭರಣ ಮಾರುಕಟ್ಟೆಯಲ್ಲಿ 22ವರ್ಷದ ವಿಶ್ವಾಸಾರ್ಹ ಪರಂಪರೆ ಇರುವ ಸಿಟಿಗೋಲ್ಡ್ ಆಂಡ್ ಡೈಮಂಡ್ಸ್‌ನ ನವೀಕೃತ ವಿಶಾಲವಾದ ಶೋರೂಂ, ಲೈಟ್‌ವೈಟ್ ಡೈಲಿವೇರ್ ಆಭರಣಗಳ ಎಕ್ಸ್‌ಕ್ಲೂಸಿವ್ ಬ್ರಾಂಡ್ ಆದ ಕೇವಾ ಬಾಕ್ಸ್ ಶೋರೂಂ ಲೋಕಾರ್ಪಣೆ ಗೊಂಡಿತು. ಸಿಟಿಗೋಲ್ಡ್‌ನ ನೂತನ ಶೋರೂಂನ್ನು ಸಯ್ಯಿದ್ ಅಲಿ ತಂಙಳ್ ಕುಂಬೋಳ್, ಕೇವಾ ಬಾಕ್ಸ್ ಶೋರೂಂನ ಉದ್ಘಾಟನೆಯನ್ನು ಮಾಜಿ ಶಾಸಕ ಎನ್.ಎ. ನೆಲ್ಲಿಕುನ್ನು, ಡೈಮಂಡ್ ಕೌಂಟರ್ ಕಾಸರಗೋಡು ಜಿ.ಪಂ. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಇರ್ಫಾನಾ ಇಕ್ಬಾಲ್ ನಿರ್ವಹಿಸಿದರು. ಮೊದಲ ಮಾರಾಟವನ್ನು ಸಿಂಕೋ ಗ್ರೂಪ್ ಆಫ್ ಕಂಪೆನೀಸ್ ಡೈರೆಕ್ಟ್ ನಸೀರ್ ಮಾಣಿಕೋತ್‌ರಿಗೆ ನೀಡಿ ನಿರ್ವಹಿಸಿದರು. ಸಿಟಿಗೋಲ್ಡ್ ಅಧ್ಯಕ್ಷ ಕೆ.ಎ. ಅಬ್ದುಲ್ ಕರೀಂ, ಎಕ್ಸಿಕ್ಯೂಟಿವ್ ಡೈರೆಕ್ಟರ್ ನೌಶಾದ್ ಸಿ.ಎ, ಯೂಸಫ್ ಹಾಜಿ ಕೀಯೂರು, ಕೇವಾ ಬಾಕ್ಸ್ ಸ್ಥಾಪಕ, ಸಿಟಿಗೋಲ್ಡ್ ಮೆನೇಜಿಂಗ್ ಡೈರೆಕ್ಟರ್ ಮೊಹಮ್ಮದ್ ಇರ್ಷಾತ್, ಪಿ.ಎಸ್. ಇಬ್ರಾಹಿಂ, ಮೊಯಿಚ್ಚಾ ಪೈವಳಿಕೆ, ಮುಸ್ಲಿಂಲೀಗ್ ರಾಜ್ಯ ಕಾರ್ಯಾಧ್ಯಕ್ಷ ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು. ಖ್ಯಾತ ವಯಲಿನಿಸ್ಟ್ ಗೋಕುಲ್ ಕೃಷ್ಣರ ಲೈವ್ ಪರ್ಫೋರ್ಮೆನ್ಸ್ ಹಮ್ಮಿಕೊಳ್ಳಲಾಗಿತ್ತು. ಉದ್ಘಾಟನೆಯಂಗವಾಗಿ ಗ್ರಾಹಕರಿಗೆ ಪ್ರೀಮಿಯಂ, ವಿಂಟೇಜ್ ಸಂಗ್ರಹಗಳು ಹೊರತುಪಡಿಸಿರುವ ಚಿನ್ನಾಭರಣಗಳಿಗೆ ಮಜೂರಿ 49 ಶೇಕಡಾ ಮಾತ್ರವಾಗಿದೆ. ಅಲ್ಲದೆ ಡೈಮಂಡ್ ಆಭರಣಗಳಿಗೆ ಕ್ಯಾರೆಟ್‌ಗೆ 15,೦೦೦ ರೂ.ಗಳ ಪ್ರತ್ಯೇಕ ರಿಯಾಯಿತಿ ಆಫರ್‌ಗಳು ಲಭ್ಯವೆಂದು ಸಂಸ್ಥೆ ತಿಳಿಸಿದೆ.

RELATED NEWS

You cannot copy contents of this page