ಮೀಯಪದವು: ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆ ಹಾಗೂ ವಿದ್ಯಾವರ್ಧಕ ಎಯುಪಿ ಶಾಲೆಯ ಆತಿಥ್ಯದಲ್ಲಿ ನಾಲ್ಕು ದಿನಗಳ ಕಾ¯ ನಡೆದ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ ಸಮಾಪ್ತಿ ಗೊಂಡಿತು. ನಿನ್ನೆ ನಾರಾಯಣೀಯಂ ರಂಗಮAದಿರದಲ್ಲಿ ನಡೆದ ಸಮಾರೋಪ ಸಮಾರಂಭವನ್ನು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಸೋಯಾ ಕೆ.ಕೆ ಉದ್ಘಾಟಿಸಿದರು. ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಯು.ಕೆ. ಸೈಫುಲ್ಲಾ ತಂಙಳ್ ಅಧ್ಯಕ್ಷತೆ ವಹಿಸಿದ್ದರು. ಮೀಂಜ ಪಂಚಾಯತ್ ಅಧ್ಯಕ್ಷ ಹಾಗೂ ಸಂಘಟನಾ ಸಮಿತಿ ಅಧ್ಯಕ್ಷ ಸಿ.ಎ. ತಾಜುದ್ದೀನ್, ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಇರ್ಫಾನಾ ಇಕ್ಬಾಲ್ ಕೆ. ಮುಖ್ಯ ಅತಿಥಿಯಾಗಿದ್ದರು. ಮೀಂಜ ಪಂಚಾಯತ್ ಉಪಾಧ್ಯಕ್ಷೆ ಉಷಾ ಪೂಂಜ, ಶ್ರೀನಿವಾಸ ನಾಯಕ್, ಆರ್.ಎಂ. ಶ್ರೀಧರ ರಾವ್, ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಉಪಸ್ಥಿತರಿದ್ದರು. ಮಂಜೇಶ್ವರ ಸಹಾಯಕ ಶಿಕ್ಷಣಾಧಿಕಾರಿ ನಾರಾಯಣ ದೇಲಂಪಾಡಿ ಬಹುಮಾನ ವಿತರಿಸಿದರು. ಮೋಹನ ರೈ, ಸೌಮ್ಯ ಕೆ., ಮಿಸ್ರಿಯ ಎಂ. ಕುಂಞÂ, ಬೀಫಾತಿಮಾ, ಶಾಂತ ಕುಮಾರಿ ಬಿ., ಶಾಲಿನಿ ಬಿ. ಶೆಟ್ಟಿ, ಸಂಧ್ಯಾ ಬಿ., ಸುನಿಲ್ ಕುಮಾರ್ ಎಂ., ಲತೀಶ ಕೆ., ರಘುನಾಥ ಶೆಟ್ಟಿ, ಜಯರಾಮ ಬಲ್ಲಂಗುಡೆಲು, ಸಿಡಿಎಸ್ ಅಧ್ಯಕ್ಷೆ ಪದ್ಮಜಾ, ಮೃದುಳಾ ಕೆ.ಎಂ., ಹಮೀದ್ ಮೈತಾಲ್, ಸಂಧ್ಯಾಶ್ರೀ ಶುಭ ಹಾರೈಸಿದರು. ರಮೇಶ್ ಕೆ.ಎನ್. ಸ್ವಾಗತಿಸಿ, ಕಿರಣ್ ಕೆ.ಎಸ್. ವಂದಿಸಿದರು. ವಿದ್ಯಾರ್ಥಿಗಳ ಕಲಾ ಪ್ರತಿಭೆ, ಶಿಕ್ಷಕರ ಪರಿಶ್ರಮ, ಪೋಷಕರ ಸಹಕಾರ ಹಾಗೂ ಸಂಘಟಕರ ಸಮರ್ಪಣಾ ಮನೋಭಾವದೊಂದಿಗೆ ನಡೆದ ಕಲೋತ್ಸವವು ಮಂಜೇಶ್ವರ ಉಪಜಿಲ್ಲೆಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೊಸ ಸಂಭ್ರಮವನ್ನು ಮೂಡಿಸಿತು. ಕಲೋತ್ಸವದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಲಾಯಿತು.





