ಕಾಸರಗೋಡು: ಜಿಲ್ಲೆಯ ನದಿ ತೀರ ಪ್ರವಾಸೋಧ್ಯಮದ ಸಾಧ್ಯತೆಗಳನ್ನು ರಾಷ್ಟ್ರಮಟ್ಟದಲ್ಲಿ ಪರಿಚಯಿಸುವ ಹಾಗೂ ನದಿಗಳನ್ನು ಕೇಂದ್ರೀಕರಿಸಿ ಪ್ರವಾಸೋಧ್ಯಮ ಉತ್ತೇಜಿಸುವ ಉದ್ದೇಶದಿಂದ ಕಾಸರಗೋಡು ಆಂಗ್ಲಿಂಗ್ ಚಾಂಪ್ಯನ್‌ಶಿಪ್ ನಾಳೆ ಆರಿಕ್ಕಾಡಿ ಶಿರಿಯ ನದಿ ತೀರದಲ್ಲಿ ನಡೆಯ ಲಿದೆ. ಬೆಳಿಗ್ಗೆ 6 ಗಂಟೆಗೆ ಸ್ಪರ್ಧೆ ಆರಂಭವಾಗಲಿದೆ. ಜಿಲ್ಲಾ ಪ್ರವಾಸೋದ್ಯಮ ಪ್ರಚಾರ ಮಂಡಳಿ ಮತ್ತು ಕಾಸರಗೋಡು ಬ್ಲೋಕ್ ಪಂಚಾಯತ್, ಕುಂಬಳೆ ಪಂಚಾಯತ್ ಇಂಡಿಯಾ ಟೂರಿಸಂ ಇಲಾಖೆ ಜಂಟಿಯಾಗಿ ರಾಷ್ಟ್ರ ಮಟ್ಟದ ಈ ಸ್ಪರ್ಧೆಯನ್ನು ಆಯೋಜಿಸಿದೆ. ವಿವಿಧ ರಾಜ್ಯಗಳಿಂದ ಸ್ಪರ್ಧಾಳುಗಳು ಭಾಗವಹಿಸುವರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಉದ್ಘಾಟಿಸುವರು. ಶಾಸಕರಾದ ಕಲ್ಲಟ್ರ ಮಾಹಿನ್, ಎಕೆಎಂ ಅಶ್ರಫ್ ಭಾಗವಹಿಸುವರು. ವಿಜೇತರಿಗೆ ಮಧ್ಯಾಹ್ನ ಆರಿಕ್ಕಾಡಿಯಲ್ಲಿ ನಡೆಯುವ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು.
ಅತೀ ಹೆಚ್ಚು ತೂಕದ ಮೀನು ಹಿಡಿದವರನ್ನು ವಿಜೇತರಾಗಿ ಆಯ್ಕೆ ಮಾಡಲಾಗುತ್ತದೆ. ಇವರಿಗೆ 4೦,೦೦೦ ರೂ. ಬಹುಮಾನಸ ದ್ವಿತೀ ಯ ಸ್ಥಾನ ಪಡೆದವರಿಗೆ 3೦,೦೦೦ ರೂ, ತೃತೀಯ ಸ್ಥಾನದವರಿಗೆ 2೦,೦೦೦ ರೂ. ನೀಡಲಾಗುವುದು. ಅಲ್ಲದೆ ಭಾಗವಹಿಸುವ ಸ್ಪರ್ಧಿಗಳಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಗುವುದು.






