ಪೈವಳಿಕೆ: ಚಿಪ್ಪಾರು ನಿವಾಸಿ, ಹಿರಿಯ ಬಡಗಿ ತಿಮ್ಮಯ್ಯ ಆಚಾರ್ಯ (72) ಸ್ವ-ಗೃಹದಲ್ಲಿ ನಿಧನ ಹೊಂದಿದರು. ಬಾಲ್ಯದಿಂದಲೇ ಮರದ ಕೆಲಸವನ್ನು ನಿರ್ವಹಿಸುತ್ತಿದ್ದ ಇವರು ಚಿರಪರಿಚಿತರಾಗಿದ್ದರು. ಹವ್ಯಾಸಿ ಮದ್ದಳೆ ವಾದಕರೂ ಆಗಿದ್ದರು. ಮೃತರು ಪತ್ನಿ ಇಂದಿರ, ಮಕ್ಕಳಾದ ಪ್ರಕಾಶ್, ಕಿಶೋರ್, ಲೊಕೇಶ್, ಹರಿಪ್ರಸಾದ್, ಮಮತ, ಸಮಿತಾ, ಶ್ವೇತಾ, ಅಳಿಯಂದಿರಾದ ನವೀನ, ದಿನೇಶ, ಸೊಸೆಯಂದಿರಾದ ವಿದ್ಯಾ, ದೀಪಿಕಾ, ಸಹೋದರ ದೇವಪ್ಪ ಆಚಾರ್ಯ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಓರ್ವ ಸಹೋದರ ಸೇಸಪ್ಪ ಆಚಾರ್ಯ, ಸಹೋದರಿಯರಾದ ತುಂಗಾ, ಸಾವಿತ್ರಿ, ಚಂದ್ರಾವತಿ, ರಾಧ, ಪಾರ್ವತಿ ಈ ಹಿಂದೆ ನಿಧನ ಹೊಂದಿದ್ದಾರೆ.






