ಮಾರ್ಪನಡ್ಕ: ಕುಂಬ್ಡಾಜೆ ಬಳ್ಳಪದವು ನಿವಾಸಿ ಮಾರ್ಸಲ್ ರೋಡ್ರಿಗಸ್ರವರ ಪತ್ನಿ ಕಾರ್ಮಿನ್ ಕ್ರಾಸ್ತಾ (65) ನಿನ್ನೆ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದರು. ಮೃತರು ಪತಿ, ಮಕ್ಕಳಾದ ಪ್ರವೀಣ್ ರೋಡ್ರಿಗಸ್, ಸ್ಟ್ಯಾನಿ ರೋಡ್ರಿಗಸ್, ಪ್ರಶಾಂತ್ ರೋಡ್ರಿಗಸ್, ವೆರೊನಿಕ, ಕ್ಲಾವಿಯಾ, ಸ್ಲಿವಿಯಾ, ಐರಿನ್, ಅಳಿಯಂದಿರಾದ ದಿನೇಶ್, ರಾಜೇಶ್, ಪೌಲ್ ಡಿ’ಸೋಜ, ಸೊಸೆಯಂದಿರಾದ ಪುಸಿಲ್ಲ, ಐರಲ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ನಾರಂಪಾಡಿ ಇಗರ್ಜಿಯಲ್ಲಿ ನಾಳೆ ಅಂತ್ಯ ಸಂಸ್ಕಾರ ನಡೆಯಲಿದೆ.






