ಮಾರ್ಪನಡ್ಕ ಜನಾರ್ದನರ ಚಿಕಿತ್ಸಾ ನೆರವಿಗೆ ಕೋರಿಕೆ: ಸಹಾಯ ಸಮಿತಿ ರಚನೆ

ಮಾರ್ಪನಡ್ಕ: ಮಾರ್ಪನಡ್ಕ ನಿವಾಸಿ ಜನಾರ್ದನ ಎಂಬವರ ಎರಡು ಕಿಡ್ನಿ ವೈಫಲ್ಯಗೊಂಡಿದ್ದು, ಚಿಕಿತ್ಸೆಯಲ್ಲಿ ದ್ದಾರೆ. ಕುಟುಂಬದ ಏಕಮಾತ್ರ ಆಧಾರಸ್ತಂಭವಾಗಿರುವ ಇವರು ಖಾಯಿಲೆಯಿಂದ ಕಂಗೆಟ್ಟಿರುವ ಕಾರಣ ಕುಟುಂಬ ಸಂದಿಗ್ಧಾವಸ್ಥೆಯಲ್ಲಿದೆ. ಮಾರ್ಪನಡ್ಕ ಉನ್ನತಿಯಲ್ಲಿರುವ ಈ ಕುಟುಂಬವನ್ನು ರಕ್ಷಿಸಲು, ಜನಾರ್ದನರ ಚಿಕಿತ್ಸೆಗೆ ನೆರವಾಗುವ ಉದ್ದೇಶದಿಂದ ಚಿಕಿತ್ಸಾ ಸಹಾಯ ಸಮಿತಿ ರೂಪೀಕರಿಸ ಲಾಯಿತು. ಈ ಬಗ್ಗೆ ಜಯನಗರ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಪಾಂಚಜನ್ಯ ಸಾಂಸ್ಕೃತಿಕ ಭವನದಲ್ಲಿ ನಡೆದ ಸಭೆಯನ್ನು ಹರಿನಾರಾಯಣ ಮಾಸ್ತರ್ ಉದ್ಘಾಟಿಸಿದರು. ವಾರ್ಡ್ ಪ್ರತಿನಿಧಿ ಸೌಭಾಗ್ಯಲಕ್ಷ್ಮಿ ಅಧ್ಯಕ್ಷತೆ ವಹಿಸಿದರು. ಸಮಿತಿಗೆ ಮುಖ್ಯ ರಕ್ಷಾಧಿಕಾರಿಗಳಾಗಿ ಕುಂಬ್ಡಾಜೆ ಪಂಚಾಯತ್ ಅಧ್ಯಕ್ಷೆ ಯಶೋಧ ಎನ್., ರಕ್ಷಾಧಿಕಾರಿಯಾಗಿ ವಾರ್ಡ್ ಪ್ರತಿನಿಧಿ ಸೌಭಾಗ್ಯಲಕ್ಷ್ಮಿ, ಅಧ್ಯಕ್ಷರಾಗಿ ಹರಿನಾರಾಯಣ ಮಾಸ್ತರ್ ಶಿರಂತ್ತಡ್ಕ, ಕಾರ್ಯಾಧ್ಯಕ್ಷರಾಗಿ ಶರೀಫ್ ಪಾಲೇ ಕಾರ್, ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ನಾರಂಪಾಡಿ, ಕಾರ್ಯದರ್ಶಿ ಯಾಗಿ ರಮೇಶ್ ಆಳ್ವ ಕಡಾರು, ಕೋಶಾಧಿಕಾರಿಯಾಗಿ ಸಂತೋಷ್ ಮಾರ್ಪನಡ್ಕ ಆಯ್ಕೆಯಾದರು. ಅಲ್ಲದೆ ಹಲವು ಮಂದಿಯನ್ನು ಇತರ ಪದಾಧಿಕಾರಿಗಳಾಗಿ ನೇಮಕ ಮಾಡಲಾಗಿದೆ.

ಜನಾರ್ದನರಿಗೆ ಈಗ ಡಯಾಲಿಸಿಸ್ ನಡೆಸಲಾಗುತ್ತಿದ್ದು, ಇದಕ್ಕೆ ಬಹುದೊಡ್ಡ ಮೊತ್ತ ಬೇಕಾಗಿ ಬರುತ್ತಿದೆ. ಅತ್ಯಂತ ಚಿಂತಾಜನಕ ಸ್ಥಿತಿಯಲ್ಲಿರುವ ಇವರಿಗೆ ಶೀಘ್ರವೇ ಚಿಕಿತ್ಸೆ ಲಭ್ಯಗೊಳಿಸಲು ಬೃಹತ್ ಮೊತ್ತದ ಅಗತ್ಯವಿದ್ದು, ಸಹಾಯಕ್ಕಾಗಿ ಕುಟುಂಬ, ಸಮಿತಿ ವಿನಂತಿಸಿದೆ.

You cannot copy contents of this page