ಹೊಸಂಗಡಿ: ಮಂಜೇಶ್ವರ ಬ್ಲಾಕ್ ಪಂಚಾಯತ್ನಲ್ಲಿ ಮನೆ ನಿರ್ಮಾಣಕ್ಕೆ ಬಡವರಿಗೆ ಕೊಡಬೇಕಾದ ೧೭ಲಕ್ಷ ರೂ.ವಂಚನೆ ಪ್ರಕರಣದಲ್ಲಿ ಆರೋಪಿ ಯನ್ನು ತೋರಿಕೆಗೆ ಕೆಲಸದಿಂದ ವಜಾ ಗೊಳಿಸಿ ಪ್ರಕಾರಣವನ್ನು ಮುಚ್ಚಿ ಹಾಕಲು ಬ್ಲಾಕ್ ಪಂಚಾಯತ್ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಆರೋಪಿಯನ್ನು ಬಂದಿsಸದೆ, ತನಿಖೆ ಆರಂಭ ಮಾಡದೆ ಬ್ಲಾಕ್ ಆಡಳಿತ ಬಡವರಿಗೆ ವಂಚನೆ ಮಾಡುತ್ತಿದೆ. ವಂಚನೆ ಆಗಿರುವ ೧೭ಲಕ್ಷ ರೂ.ಗಳನ್ನು ಬ್ಲಾಕ್ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಸ್ವಂತ ಕೈ ಯಿಂದ ಫಲÁನುಭವಿಗಳಿಗೆ ನೀಡಬೇಕೆಂಬುದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ ಅಗ್ರಹಿಸಿದರು.
ಈ ಪ್ರಕರಣವನ್ನು ಕ್ಲರ್ಕ್ ತಲೆಗೆ ಕಟ್ಟಿ ಲಘುಕರಿಸಲಾಗುತ್ತಿದೆ. ನಕಲಿ ಖಾತೆಗೆ ದುಡ್ಡು ಸೇರಲು ಚೆಕ್ ಸಹಿ ಮಾಡಿದ ಬ್ಲಾಕ್ ಕಾರ್ಯದರ್ಶಿ, ಅನುಮತಿ ನೀಡಿದ ಅಧ್ಯಕ್ಷ, ಹಣ ವರ್ಗಾಯಿಸಿದ ಟ್ರಷರಿ ಅಧಿಕಾರಿ ಗಳನ್ನು ತನಿಖೆಗೆ ಒಳಪಡಿಸಬೇಕು ಹಾಗೂ ಅವರನ್ನು ವಜಾ ಗೊಳಿಸ ಬೇಕು ಎಂದು ಆದರ್ಶ ಬಿ.ಎಂ ಹೇಳಿದರು.






