ಕುಂಬಳೆ: ಹೊಸ ಫ್ಲಾಟ್ನಲ್ಲಿ ಇಂದು ವಾಸ ಆರಂಭಿಸಲಿರುವ ಸಿದ್ಧತೆ ಮಧ್ಯೆ ನಿನ್ನೆ ರಾತ್ರಿ ಯುವಕ ಕುಸಿದುಬಿದ್ದು ಮೃತಪಟ್ಟ ಘಟನೆ ನಡೆದಿದೆ. ಬಂಬ್ರಾಣ ಕಕ್ಕಳಕುನ್ನು ನಿವಾಸಿ ಅಸ್ಲಾಂ (40) ಮೃತ ವ್ಯಕ್ತಿ. ಕುಂಬಳೆ ಮಾವಿನಕಟ್ಟೆಯ ಫ್ಲಾಟ್ ನಲ್ಲಿ ಇಂದು ಬೆಳಿಗ್ಗೆ ವಾಸ ಆರಂಭಿಸಲಿರುವ ಸಿದ್ಧತೆಯಲ್ಲಿ ಅಸ್ಲಾಂ ನಿರತರಾಗಿದ್ದರು. ಈ ಮಧ್ಯೆ ನಿನ್ನೆ ರಾತ್ರಿ ಫ್ಲಾಟ್ನಲ್ಲಿ ಕುಸಿದುಬಿದ್ದಿದ್ದಾರೆ. ಕೂಡಲೇ ಕುಂಬಳೆಯ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಅಸ್ಲಾಂರ ಮದುವೆಯೂ ಇಂದು ಸಂಜೆ ನಡೆಯಬೇಕಾಗಿತ್ತು. ಇವರು ಹೋಟೆಲ್ ಕಾರ್ಮಿಕನಾಗಿದ್ದರು. ದಿವಂಗತರಾದ ಅಬ್ದುಲ್ ರಹ್ಮಾನ್ ಮುಸ್ಲಿಯಾರ್-ಮರಿಯುಮ್ಮ ದಂಪತಿ ಪುತ್ರನಾದ ಮೃತರು ಸಹೋದರ-ಸಹೋದರಿ ಯರಾದ ಸುಬೈದ, ಸಾಜಿದ, ನಫೀಸ, ಅಬ್ದುಲ್ಲ, ಹನೀಫ್, ಖಾಲಿದ್, ಶಾಹುಲ್ ಹಮೀದ್ ಸಖಾಫಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






