ಬದಿಯಡ್ಕ: ಶಬರಿಗಿರಿ ಶ್ರೀ ಅಯ್ಯಪ್ಪ ಮಂದಿರ ಪ್ರತಿಷ್ಠಾ ಕಲಶೋತ್ಸವಕ್ಕೆ ಶಬರಿಮಲೆ ಪ್ರಧಾನ ಅರ್ಚಕರಿಗೆ ಆಮಂತ್ರಣ ಪತ್ರಿಕೆ ಹಸ್ತಾಂತರ

ಬದಿಯಡ್ಕ: ಬದಿಯಡ್ಕ ಶಬರಿ ಗಿರಿಯಲ್ಲಿ ನಿರ್ಮಿಸಿದ ಅಯ್ಯಪ್ಪ ಸ್ವಾಮಿಯ ನೂತನ ಮಂದಿರದ ಪ್ರತಿಷ್ಠಾ ಕಲಶೋತ್ಸವ ಡಿ. 4ರಿಂದ 6ರವರೆಗೆ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಶಬರಿಮಲೆಯ ಪ್ರಧಾನ ಅರ್ಚಕ ಅರೀಕ್ಕರ ಸುಬ್ರಮಣಿಯನ್ ಶಂಕರನ್ ನಂಬೂದಿರಿ ಅವರಿಗೆ ಹಸ್ತಾಂತರಿಸಲಾಯಿತು.
ಶಬರಿಗಿರಿ ಮಂದಿರದ ಹಿತೈಷಿ ಗೋಸಾಡ ಶಂಕರನಾರಾಯಣ ತಂತ್ರಿ ಆಮಂತ್ರಣ ಪತ್ರಿಕೆಯನ್ನು ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಂಕರ ನಾರಾಯಣ ತಂತ್ರಿ, ಶಬರಿಗಿರಿಯಲ್ಲಿ ನೂತನ ಮಂದಿರ ನಿರ್ಮಾಣಗೊಂಡು ಪ್ರತಿಷ್ಠಾ ಕಲಶೋತ್ಸವಕ್ಕೆ ಸಿದ್ಧತೆ ನಡೆಯುತ್ತಿರು ವುದು ಅತ್ಯಂತ ಪುಣ್ಯದ ಸಂಗತಿ ಯಾಗಿದೆ. ಧಾರ್ಮಿಕ ಶ್ರದ್ಧೆ ಮತ್ತು ಭಕ್ತಿಯೊಂದಿಗೆ ಭಕ್ತಾದಿಗಳು ಕೈಜೋಡಿಸಿ ಇಂತಹ ಪವಿತ್ರ ಕಾರ್ಯವನ್ನು ಸಾಕಾರಗೊಳಿಸುತ್ತಿ ರುವುದು ಶ್ಲಾಘನೀಯ. ಅಯ್ಯಪ್ಪ ಸ್ವಾಮಿಯ ಆರಾಧನೆ, ಧಾರ್ಮಿಕ ಆಚರಣೆಗಳು ಹಾಗೂ ಆಧ್ಯಾತ್ಮಿಕ ಪರಂಪರೆಯನ್ನು ಮುಂದಿನ ತಲೆ ಮಾರಿಗೆ ಪರಿಚಯಿಸುವಲ್ಲಿ ಇಂತಹ ಕ್ಷೇತ್ರಗಳ ಪಾತ್ರ ಮಹತ್ವದ್ದಾಗಿದೆ ಎಂದು ಶುಭ ಹಾರೈಸಿದರು.
ಶಬರಿಮಲೆಯ ಪ್ರಧಾನ ಅರ್ಚಕ ಅರೀಕ್ಕರ ಸುಬ್ರಮಣಿಯನ್ ಶಂಕರನ್ ನಂಬೂದಿರಿ ಅವರು ಶಬರಿಗಿರಿ ಅಯ್ಯಪ್ಪ ಮಂದಿರದ ನೂತನ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಶುಭಾಶಯ ತಿಳಿಸಿ, ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.

RELATED NEWS

You cannot copy contents of this page