ಎಂ.ಕೆ. ಬ್ರದರ್ಸ್‌ನಿಂದ ರಕ್ತದಾನ ಶಿಬಿರ

ಉಪ್ಪಳ: ಎಂ.ಕೆ ಬ್ರದರ್ಸ್ ಉಪ್ಪಳ ಕುರ್ಚಿಪಳ್ಳ ಇದರ ಆಶ್ರಯದಲ್ಲಿ ಹುಸೈನ್ ರಂಜಾನ್ ಮಣಿಮುಂಡ ಮತ್ತು ಖದೀಜಾಬಿ ಮಣಿಮುಂಡ ಇವರ ಸ್ಮರಣಾರ್ಥ ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಇವರ ಸಹಯೋಗದಲ್ಲಿ 6ನೇ ವರ್ಷದ ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ಉಪ್ಪಳ ರೈಲ್ವೇ ನಿಲ್ದಾಣ ಬಳಿಯ ಲೀಗ್ ಮೂಸ ಕಂಪೌAಡ್‌ನಲ್ಲಿ ನಡೆಯಿತು. ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹಿಮಾನ್ ಉದ್ಘಾಟಿಸಿದರು. ಎಂ.ಕೆ ಬ್ರದರ್ಸ್ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಹಮೀದ್ ಅಧ್ಯಕ್ಷತೆ ವಹಿಸಿದರು. ಪಂಚಾಯತ್ ಉಪಾಧ್ಯಕ್ಷೆ ಶಮೀನ ಟೀಚರ್, ವಾರ್ಡ್ ಸದಸ್ಯೆ ನಾಜಿಯಾ ಬಾನು, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶೇಕ್ ಫರ್ವೇಜ್, ಕೋಶಾಧಿಕಾರಿ ಶೇಕ್ ಮುಬೀನ್, ಕ್ಯಾಪ್ಟನ್ ಮೊಹಮ್ಮದ್ ಅಸ್ಲಾಮ್, ಬ್ಲೋಕ್ ಪಂಚಾಯತ್ ಮಾಜಿ ಉಪಾಧ್ಯಾಕ್ಷ ಹನೀಫ್ ಪಿ.ಕೆ. ಶುಭಾಂಶನೆಗೈದರು. ಹಲವು ಮಂದಿ ಇದರ ಪ್ರಯೋಜನೆಯನ್ನು ಪಡೆದುಕೊಂಡರು.

RELATED NEWS

You cannot copy contents of this page