ಕ್ಯಾನ್ಸರ್‌ನಿಂದ ಬಳಲುತ್ತಿರುವವರಿಗೆ ಕೂದಲು ದಾನ ಮಾಡಿ ಮಾನವೀಯತೆ ಮೆರೆದ 6 ವರ್ಷದ ಬಾಲಕ

ಉಪ್ಪಳ: ಪ್ರತಾಪನಗರ ನಿವಾಸಿ ಕುಬಣೂರು ಶ್ರೀರಾಮ ಎ.ಯು.ಪಿ ಶಾಲೆಯ ಯು.ಕೆ.ಜಿ ವಿದ್ಯಾರ್ಥಿ ಧ್ಯಾನ್‌ಕೃಷ್ಣ ತನ್ನ ತಲೆ ಕೂದಲನ್ನು ಕ್ಯಾನ್ಸರ್‌ನಿಂದ ಬಳಲುತ್ತಿವವರಿಗೆ ನೆರವಾಗುವ ಸದುದ್ದೇಶದಿಂದ ದಾನ ಮಾಡುವ ಮೂಲಕ ಮಾನವೀಯತೆಯ ಅಪೂರ್ವ ಸಂದೇಶ ಸಾರಿದ್ದಾನೆ. ಹರೀಶ -ಪೂರ್ಣಿಮ ದಂಪತಿ ಪುತ್ರನಾದ ಈತ ಕಳೆದ ಐದೂವರೆ ವರ್ಷಗಳಿಂದ ತಲೆಕೂದಲನ್ನು ತೆಗೆಯದೆ ಸೋಮವಾರ ಮಂಗಳೂರು ಖಾಸಾಗಿ ಆಸ್ಪತ್ರೆಗೆ ಹಸ್ತಾಂತ ರಿಸಿದ್ದಾನೆ. ಈ ಪುಟ್ಟ ಮಗುವಿನ ಕಾರ್ಯ ನಿಜಕ್ಕೂ ಶ್ಲಾಘನೀಯ. ಬಾಲಕನ ಈ ಸಾಧನೆಗೆ ಶಾಲೆಯ ವತಿಯಿಂದ ಅಭಿನಂದಿಸಿದ್ದಾರೆ.

RELATED NEWS

You cannot copy contents of this page