ಮಂಜೇಶ್ವರ: ಕಾಸರಗೋಡು ನಿವಾಸಿಯೋರ್ವರ ನೇತೃತ್ವದಲ್ಲಿ ಹೊರ ರಾಜ್ಯಗಳಿಂದ ಭಾರೀ ಪ್ರಮಾಣದ ಮದ್ಯವನ್ನು ಅನಧಿಕೃತವಾಗಿ ಮಾರಾಟ ಮಾಡಲಾಗುತ್ತಿದೆಯೆಂಬ ಸ್ಪಷ್ಟ ಸೂಚನೆ ಅಬಕಾರಿ ಇಲಾಖೆಗೆ ಲಭಿಸಿದೆ.
ಕರ್ನಾಟಕ ಬಂಟ್ವಾಳದ ಅಬಕಾರಿ ತಂಡ ನಿನ್ನೆ ಎರಡೆಡೆಗಳಲ್ಲಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ವಶಪಡಿಸಲಾದ ಭಾರೀ ಪ್ರಮಾಣದ ಗೋವಾ ನಿರ್ಮಿತ ಮದ್ಯಕ್ಕೆ ಸಂಬಂಧಿಸಿ ನಡೆಸಲಾದ ತನಿಖೆಯಲ್ಲಿ ಇಂತಹ ಅನಧಿಕೃತ ಮದ್ಯ ಸಾಗಾಟ ಕಾಸರಗೋಡು ನಿವಾಸಿಯೋರ್ವರ ನೇತೃತ್ವದಲ್ಲಿ ನಡೆಯುತ್ತಿದೆಯೆಂಬುವುದು ಸ್ಪಷ್ಟಗೊಂಡಿದೆ. ಆದ್ದರಿಂದ ಆತನ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಯೆಂದು ಬಂಟ್ವಾಳ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಬಂಟ್ವಾಳ ಅಬಕಾರಿ ತಂಡ ನಿನ್ನೆ ಕಲ್ಲಡ್ಕದಲ್ಲಿ ನಡೆಸಿದ ಕಾರ್ಯಾಚರಣೆ ಯಲ್ಲಿ 189.9 ಲೀಟರ್ ಗೋವಾ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿ ಕೊಂಡಿದ್ದಾರೆ. ಈ ಮಾಲು ಸಾಗಿಸುತ್ತಿದ್ದ ಕೇರಳ ರಾಜ್ಯ ನೋಂದಾಯಿತ ಎರಡು ಕಾರುಗಳು ಸೇರಿದಂತೆ ಒಟ್ಟು 12.65 ಲಕ್ಷ ರೂ. ಮೌಲ್ಯದ ಮಾಲುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಮಂಜೇಶ್ವರ ನಿವಾಸಿಗಳಾದ ಚಂದ್ರಶೇಖರ, ಸಫ್ವಾನ್ ಮತ್ತು ಮೊಹಮ್ಮದ್ ಶಾಫಿನ್ ಎಂಬವರನ್ನು ವಶಕ್ಕೆ ತೆಗೆದುಕೊಂಡ ಅವರ ಮೇಲೆ ಪ್ರಕರಣ ದಾಖಲಿಸಿದ ಬಳಿಕ ಅವರನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಲಾ ಗಿತ್ತು. ಈ ಬಗ್ಗೆ ನಡೆಸಿದ ತನಿಖೆಯಲ್ಲಿ ಕಾಸರಗೋಡಿಗೆ ಮದ್ಯ ಸಾಗಿಸುವ ಇಂತಹ ದಂಧೆ ಕಾಸರಗೋಡು ನಿವಾಸಿ ಯೋರ್ವನ ನೇತೃತ್ವದಲ್ಲಿ ನಡೆಯುತ್ತಿ ದೆಯೆಂಬ ಮಾಹಿತಿ ಅಬಕಾರಿ ತಂಡಕ್ಕೆ ಲಭಿಸಿದೆ. ಈ ದಂಧೆಗಾಗಿ ಕಾಸರಗೋ ಡು ನಿವಾಸಿಗಳನ್ನು ನೇಮಿಸಿ ಅವರ ಮೂಲಕ ವಾಹನಗಳಲ್ಲಿ ಅನಧಿಕೃತವಾಗಿ ಮದ್ಯ ಸಾಗಿಸುತ್ತಿದ್ದಾನೆಂದು ತನಿಖೆಯಲ್ಲಿ ಸ್ಪಷ್ಟಗೊಂಡಿದೆಯೆಂದೂ ಅಧಿಕಾರಿಗಳು ತಿಳಿಸಿದ್ದಾರೆ.






