ಕುಂಬಳೆಯ ಹಿರಿಯ ವ್ಯಾಪಾರಿ ನಿಧನ

ಕುಂಬಳೆ: ಕುಂಬಳೆ ಪೇಟೆಯ ಅನಿಲ್ ಕುಂಬ್ಳೆ ರಸ್ತೆ ನಿವಾಸಿಯೂ ಕುಂಬಳೆಯ ಹಿರಿಯ ವ್ಯಾಪಾರಿಯಾದ ಅಬ್ದುಲ್ ಖಾದರ್ ಯಾನೆ ಅಂದುಕ್ಕ ಇಚ್ಚ (೮೫) ಎಂಬಿವರು ನಿನ್ನೆ ರಾತ್ರಿ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಇವರು ಕುಂಬಳೆ ಪೇಟೆಯಲ್ಲಿರುವ ಎಂ.ಎ. ಸ್ಟೋರ್‌ನ ಮಾಲಕನಾಗಿದ್ದರು.

ಮೃತರು ಪತ್ನಿ ಆಯಿಶ, ಮಕ್ಕಳಾದ ನಝೀಲ್ (ಕುಂಬಳೆಯ ಅರೆಂಬಿಯನ್ ರೆಸ್ಟಾರೆಂಟ್, ಮೊಗ್ರಾಲ್ ಸ್ಟೋರ್ ಮಾಲಕ), ರುಬೀನ, ಅನೀಶ, ಸುನೀಶ, ಅಳಿ ಯಂದಿರಾದ ಅಬ್ದುಲ್ಲ, ಅಬ್ಬಾಸ್, ಸುಬೈ ರ್, ಸೊಸೆ ಸಫ, ಸಹೋದರ- ಸಹೋ ದರಿ ಯರಾದ ಉಮ್ಮರ್, ಫಕ್ರುದ್ದೀನ್, ಅವ್ವಮ್ಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತ ದೇಹದ ಅಂತ್ಯ ಸಂಸ್ಕಾರ ಕುಂಬಳೆ ಬದರ್ ಜುಮಾ ಮಸೀದಿ ಬಳಿ ಇಂದು ಮಧ್ಯಾಹ್ನ ನಡೆಯಲಿದೆ ಯೆಂದು ಸಂಬಂಧಿಕರು ತಿಳಿಸಿದ್ದಾರೆ.

RELATED NEWS

You cannot copy contents of this page