ಸರ್ವಧರ್ಮದ ಸೌಹಾರ್ದ ಸಂಗಮ, ಸಾಮೂಹಿಕ ಇಫ್ತಾರ್ ಕೂಟ

ಪೈವಳಿಕೆ: ತರಂಗಿಣಿ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಸುಬ್ಬಯ ಕಟ್ಟೆ ಇದರ ಆಶ್ರಯದಲ್ಲಿ ಭಾವೈಕ್ಯತೆಯ ಸರ್ವಧರ್ಮದ ಸೌಹಾರ್ದ ಸಮ್ಮಿಲನ’ ಹಾಗೂ ಸಾಮೂಹಿಕ ಇಪ್ತಾರ್ ಕೂಟ ಜರಗಿತು. ಕ್ಲಬ್ಬಿನ ಅಧ್ಯಕ್ಷÀ ಪ್ರಕಾಶ ರೈ ಬಿ.ಜಿ ಅಧ್ಯಕ್ಷತೆಯಲ್ಲಿ ಸುಬ್ಬಯ ಕಟ್ಟೆ ರಿಫಾಯಿಯ ಜುಮಾ ಮಸೀದಿಯ ಖತೀಬï ಅಲ್ ಹಜ್ ಅಬ್ಧುಲ್ ಹಮೀದ್ ಮದನಿ ಉದ್ಘಾಟಿಸಿದರು. ಪೆರ್ಮದೆ ಸಂತ ಲಾರೆನ್ಸರ ದೇವಾಲಯದ ಧರ್ಮಗುರು ಅತೀ ವಂ| ಫಾದರ್ ಹೆರಾಲ್ಡ್ ಡಿ ಸೋಜಾ ಮಾತನಾಡಿದರು.
ಮಲಬಾರ್ ದೇವಸ್ವಂ ಬೋರ್ಡ್ ಸದಸ್ಯ ಎಂ. ಶಂಕರ್ ರೈ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಹಿರಿಯ ವಿದ್ವಾಂಸರಾದ ಮರುವಳ ನಾರಾಯಣ ಭಟ್, ಜುಮಾ ಮಸೀದಿ ಅಧ್ಯಕ್ಷ ಜನಾಬ್ ಬಿ.ಕೆ ಖಾದರ್ ಹಾಜಿ, ಕ್ಲಬ್ಬಿನ ಗೌರವಾಧ್ಯಕ್ಷ ಉದ್ಯಮಿ ಬಿ.ಎ ಖಾದರ್ ಬಗುಡೇಲ್, ಪೈವಳಿಕೆ ಪಂಚಾಯತ್ ಅಧ್ಯಕ್ಷೆ ಜಯಂತಿ’ ಸದಸ್ಯರಾದ ಝಡ್.ಎ ಕಯ್ಯಾರ್, ಅಬ್ದುಲ್ ರಝಾಕ್ ಚಿಪ್ಪಾರು’ ಅಶೋಕ ಭಂಡಾರಿ ಕೋರಿಕ್ಕಾರು, ಅಂಗಿಮೊಗರು ಸೇವ ಸಹಕಾರಿ ಬೇಂಕಿನ ಕಾರ್ಯದರ್ಶಿಗಳಾದ ವಿಠಲ್ ರೈ ಕೆ.ಬಿ, ಯೂಸಫ್’ ಪುಷ್ಪಾ ಕಮಲಾಕ್ಷ , ಭಾರತೀ ಶೆಟ್ಟಿ, ಮೊಯಿದು ಕುಟ್ಟಿ ಮಾಸ್ಟರ್, ಭಂಡಾರ ಗುತ್ತು ರಾಮಕೃಷ್ಣ ಭಂಡಾರಿ, ಸಾಮಾಜಿಕ ಕಾರ್ಯಕರ್ತರಾದ ಬಷೀರ್. ಬಿ.ಎ, ಜಮಾಯತ್ ಪ್ರಧಾನ ಕಾರ್ಯದರ್ಶಿ ಲತೀಫ್.ಬಿ.ಎ, ಅಜೀಜ್ ಚೇವಾರು ಭಾಗವಹಿಸಿದರು. ಕ್ಲಬ್ಬಿನ ಪದಾಧಿಕಾರಿ ಶಿವಪ್ರಸಾದ ಶೆಟ್ಟಿ ನಿರೂಪಿಸಿ, ಸ್ವಾಗತಿಸಿದ ಕಾರ್ಯಕ್ರಮಕ್ಕೆ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಮಾನ್. ಎ.ಆರ್.ಎಸ್ ವಂದಿಸಿದರು.

RELATED NEWS

You cannot copy contents of this page