ವಾರಂಟ್ ಆರೋಪಿಗಳ ಪತ್ತೆಗಾಗಿ ಮಂಜೇಶ್ವರದಲ್ಲಿ ಶೋಧ

ಉಪ್ಪಳ: ಲೋಕಸಭಾ  ಚುನಾವಣೆಯ ಹಿನ್ನೆಲೆಯಲ್ಲಿ  ವಾರಂಟ್ ಆರೋಪಿಗಳ ಪತ್ತೆಗಾಗಿ ಮಂಜೇಶ್ವರಪೊಲೀಸರು ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.

ಕಳೆದ ಒಂದು ವಾರದಲ್ಲಿ ಪೊಲೀಸರು ವಿವಿಧೆಡೆ ನಡೆಸಿದ ದಾಳಿಯಲ್ಲಿ ಒಟ್ಟು ೯ ಮಂದಿ ವಾರಂಟ್ ಆರೋಪಿಗಳನ್ನು ಬಂಧಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ವಿವಿಧ ಪ್ರಕರಣಗಳಿಗೆ ಸಂಬಂಧಿ ಸಿ ನ್ಯಾಯಾಲಯದಲ್ಲಿ ಹಾಜರಾಗದೆ ತಲೆಮರೆಸಿಕೊಂಡವರನ್ನು ಪತ್ತೆಹಚ್ಚಿ ಸೆರೆಹಿಡಿಯಲು ಡಿವೈಎಸ್ಪಿ ಹರಿಪ್ರಸಾದ್ ನಿರ್ದೇಶ ನೀಡಿದ್ದಾರೆ. ಇದರಂತೆ ಮಂಜೇಶ್ವರ ಪೊಲೀಸ್ ಇನ್‌ಸ್ಪೆಕ್ಟರ್ ಕೆ. ರಾಜೀವ್ ಕುಮಾರ್ ನೇತೃತ್ವದಲ್ಲಿ ವಾರಂಟ್ ಆರೋಪಿಗಳ ಪತ್ತೆಗಾಗಿ ವಿವಿಧೆಡೆ ದಾಳಿ ನಡೆಸಲಾಗುತ್ತಿದೆ.

You cannot copy contents of this page