ಬಿರುವೆರ್ ಕುಡ್ಲ ಮಂಜೇಶ್ವರ ತಾಲೂಕು ಘಟಕ ಪದಾಧಿಕಾರಿಗಳ ಆಯ್ಕೆ

ಮಂಜೇಶ್ವರ: ಬಿರುವೆರ್ ಕುಡ್ಲ ಮಂಜೇಶ್ವರ ತಾಲೂಕಿನ ಮಹಾಸಭೆ ಅಂಬಾರು ಚೆರುಗೋಳಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಮಂದಿರದಲ್ಲಿ ನಡೆಯಿತು. ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರು ಮತ್ತು ಸಲಹೆಗಾರರಾಗಿ ಶೀನಪ್ಪ ಪೂಜಾರಿ ಅಲಾರು, ಅಧ್ಯಕ್ಷರಾಗಿ ಉದಯ್ ಕುಮಾರ್ ಅಮ್ಮೇರಿ, ಉಪಾಧ್ಯಕ್ಷರಾಗಿ ಶೋಭಾ ಅಮೀನ್ ಕುಂಬ್ಳೆ, ದಿನೇಶ್ ಪೂಜಾರಿ ಕಾಡಾಪು, ಪ್ರಧಾನ ಕಾರ್ಯದರ್ಶಿಯಾಗಿ ಅನಿಲ್ ಕುಮಾರ್ ಪ್ರತಾಪನಗರ, ಜತೆ ಕಾರ್ಯದರ್ಶಿಗಳಾಗಿ   ಹರಿಣಿ ಪ್ರತಾಪ ನಗರ, ಸತೀಶ್ ವರ್ಕಾಡಿ, ರಿತೇಶ್ ಅಂಚನ್ ಕುಲಶೇಖರ, ಕೋಶಾಧಿ ಕಾರಿಯಾಗಿ ಸಚಿನ್ ಅಂಬಾರು ಹಾಗೂ ೧೯ ಸದಸ್ಯರನ್ನು ಆಯ್ಕೆ ಮಾಡಲಾ ಯಿತು. ತಾಲೂಕಿನಲ್ಲಿರುವ ಹಿಂದುಳಿದ ಬಡಜನರಿಗೆ ಮತ್ತು ಆರೋಗ್ಯ ಪೀಡಿ ತರಿಗೆ ಸಹಾಯಹಸ್ತ ಮತ್ತು ಬಡ ವಿದ್ಯಾ ರ್ಥಿಗಳಿಗೆ ಶಿಕ್ಷಣಕ್ಕೆ ಬೇಕಾದ ಆರ್ಥಿಕ ನೆರವು ನೀಡುವ ಯೋಜನೆಯ ಬಗ್ಗೆ ತೀರ್ಮಾನಿಸಲಾಯಿತು.

You cannot copy contents of this page