ಕೊಡ್ಯಮ್ಮೆಯಲ್ಲಿ ಇಂಡೋರ್ ಸ್ಟೇಡಿಯಂ  ನಿರ್ಮಾಣ: ಮಣ್ಣು ಪರಿಶೋಧನೆ ಆರಂಭ

ಕುಂಬಳೆ: ಕೊಡ್ಯಮ್ಮೆ ಸರಕಾರಿ ಪ್ರೌಢ ಶಾಲೆ ಮೈದಾನಕ್ಕೆ ಆಧುನಿಕ ವ್ಯವಸ್ಥೆಗಳೊಂದಿಗೆ ನಿರ್ಮಿಸುವ ಮಲ್ಟಿ ಪರ್ಪಸ್ ಇಂಡೋರ್ ಸ್ಟೇಡಿಯಂನ ಆರಂಭಿಕ ಚಟುವಟಿಕೆಗಳಿಗೆ ಚಾಲನೆ ನೀಡಲಾಗಿದೆ. ಯೋಜನೆಯ ಪೂರ್ವಭಾವಿಯಾಗಿ ಮಣ್ಣು ಪರಿಶೀಲನೆ ಆರಂಭಿಸಲಾಗಿದೆ. ಕಾಸರಗೋಡು ಅಭಿವೃದ್ಧಿ, ಪ್ಯಾಕೇಜ್‌ನಲ್ಲಿ ಒಳಪಡಿಸಿ ಎರಡು ಕೋಟಿ ರೂಪಾಯಿ ಖರ್ಚಿನಲ್ಲಿ ಮಂಜೇಶ್ವರ ಮಂಡಲದ ಮೊದಲ ಮಲ್ಟಿ ಪರ್ಪಸ್ ಇಂಡೋರ್ ಸ್ಟೇಡಿಯಂ ನಿರ್ಮಿಸಲು ಯೋಜನೆಯಿರಿಸಲಾಗಿದೆ. ಈ ಯೋಜನೆಗೆ ಈ ಹಿಂದೆಯೇ ಆಡಳಿತಾನುಮತಿ ಲಭಿಸಿದೆ. ೨೦೧೫ರಲ್ಲಿ ಶಾಸಕರಾಗಿದ್ದ ಪಿ.ಬಿ. ಅಬ್ದುಲ್ ರಜಾಕ್ ನೀಡಿದ ಮನವಿಯ ಹಿನ್ನೆಲೆಯಲ್ಲಿ ಯೋಜನೆಗೆ ಸರಕಾರ ಅಂಗೀಕಾರ ನೀಡಿದೆ. ಅನಂತರ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದ ಎ.ಜಿ.ಸಿ. ಬಶೀರ್ ಮಾಜಿ ಶಾಸಕ ಎಂ.ಸಿ. ಖಮರುದ್ದೀನ್, ಹಾಲಿ ಶಾಸಕ ಎ.ಕೆ.ಎಂ. ಅಶ್ರಫ್ ಎಂಬಿವರ ಪ್ರಯತ್ನದ ಫಲವಾಗಿ ಯೋಜನೆಗೆ ಚಾಲನೆ ಲಭಿಸಿದೆ.

Leave a Reply

Your email address will not be published. Required fields are marked *

You cannot copy content of this page