ಪಂಚಾಯತ್ ಬಾವಿಯ ನೀರು ಕಲುಷಿತ:  ಅಂಗನವಾಡಿ, ಕಾಲನಿ ನಿವಾಸಿಗಳಿಗೆ ಸಂಕಷ್ಟ

ಮಂಜೇಶ್ವರ: ಮಂಜೇಶ್ವರ ಪಂಚಾಯತ್ ವ್ಯಾಪ್ತಿಯಲ್ಲಿರುವ ೨ನೇ ವಾರ್ಡ್‌ನ ತೂಮಿನಾಡು ಅಂಗನವಾಡಿ ಪಕ್ಕದಲ್ಲಿರುವ ಬಾವಿಯೊಂದು ತ್ಯಾಜ್ಯ ತುಂಬಿ ಕಲುಷಿತಗೊಂಡಿದೆ. ಸಂಬಂಧಪಟ್ಟವರು ಬಾವಿಯನ್ನು ಶುದ್ಧೀಕರಿಸದೆ ಇರುವುದು ಆತಂಕಕ್ಕೆ ಕಾರಣವಾಗಿದೆ. ಕಲುಷಿತಗೊಂಡ ಈ ನೀರನ್ನು ಅಂಗನವಾಡಿ ಮಕ್ಕಳು ಸಹಿತ ಈ ಕಾಲನಿಯಲ್ಲಿರುವವರು ಉಪಯೋಗಿಸುತ್ತಿದ್ದಾರೆ. ಪಂಚಾಯತ್ ಅಧಿಕಾರಿ ಗಳು ಈ ಬಗ್ಗೆ ಗಮನ ಹರಿಸದ ಹಿನ್ನೆಲೆಯಲ್ಲಿ ಅಂಗನವಾಡಿ ಮಕ್ಕಳು ಇದೇ ನೀರನ್ನು ಕುಡಿಯ ಬೇಕಾದ ಪರಿಸ್ಥಿತಿ ಎದುರಾಗಿದೆ. ಊರವರು ಈ ಬಗ್ಗೆ ಹಲವು ಸಲ ಸಂಬಂಧಪಟ್ಟವರನ್ನು ವಿನಂತಿಸಿಕೊಂಡರೂ ಯಾರೂ ಇತ್ತ ಕಡೆ ಗಮನ ಹರಿಸಿಲ್ಲವೆಂದು ಸ್ಥಳೀಯರು ಹೇಳುತ್ತಿದ್ದಾರೆ. ಈ ಬಾವಿಯ ನೀರಿನಲ್ಲಿ ಕಸ ಕಡ್ಡಿ ಹಾಗೂ ಕೆಸರು ತುಂಬಿಕೊಂಡಿದೆ. ಬಾವಿಯಲ್ಲಿರುವ ನೀರಿನಲ್ಲಿ ಹುಳಗಳು ಪ್ರತ್ಯಕ್ಷ ಸ್ಥಳೀಯರು ಆರೋಪಿಸಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಬಾವಿ ಇದೀಗ ಸಾಂಕ್ರಾಮಿಕ ರೋಗದ ಕೇಂದ್ರವಾಗಿ ಪರಿಣಮಿಸಿರುವುದಕ್ಕೆ ಸ್ಥಳೀಯರು ರೋಷ ವ್ಯಕ್ತಪಡಿಸಿದದಾರೆ.

RELATED NEWS

You cannot copy contents of this page