ಅಸೌಖ್ಯ ಬಾಧಿಸಿ ಮೃತ್ಯು

ಮಧೂರು: ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟನು. ಪರಕ್ಕಿಲ ನಿವಾಸಿ ಭಾಸ್ಕರ ಮಾಯಿಪ್ಪಾಡಿ- ಜಯಂತಿ ದಂಪತಿಯ ಪುತ್ರ ನವೀನ್ ಕುಮಾರ್ (46) ಮೃತಯುವಕ. ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ  ಕೆಲಸ ನಿರ್ವಹಿಸುತ್ತಿದ್ದ ನವೀನ್ ಕುಮಾರ್‌ರ ಬೆನ್ನೆಲುಬಿಗೆ ಅಸೌಖ್ಯ ಬಾಧಿಸಿತ್ತು. ಇದರಿಂದ 18 ವರ್ಷ ಕಾಲ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಯಲ್ಲಿದ್ದರು. ಅಸೌಖ್ಯ ಉಲ್ಬಣಿಸಿದ ಹಿನ್ನೆಲೆಯಲ್ಲಿ  ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಂತೆ ನಿಧನ ಸಂಭವಿಸಿದೆ. ಮೃತರು ಸಹೋದರ- ಸಹೋದರಿಯರಾದ ಪ್ರವೀಣ್, ಚಿತ್ರಿಕ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page