ತಲೆಮರೆಸಿಕೊಂಡಿದ್ದ ಪೋಕ್ಸೋ ಪ್ರಕರಣದ ಆರೋಪಿ ಎರ್ನಾಕುಳಂನಿಂದ ಸೆರೆ

ಕಾಸರಗೋಡು: ತಲೆಮರೆಸಿ ಕೊಂಡಿದ್ದ ಪೋಕ್ಸೋ ಪ್ರಕರಣ ಆರೋಪಿಯನ್ನು ವಿದ್ಯಾನಗರ ಪೊಲೀಸರು ಎರ್ನಾಕುಳಂನಿಂದ ಬಂಧಿಸಿದ್ದಾರೆ. ಉಳಿಯತ್ತಡ್ಕ ಇಸ್ಸತ್ ನಗರ  ನಿವಾಸಿ ಬದ್ರುದ್ದೀನ್ (37) ಬಂಧಿತ ಆರೋಪಿ.  ಒಂದು ತಿಂಗಳ ಹಿಂದೆ ಚೆಟ್ಟುಂಗುಳಿಯಲ್ಲಿ ೧೬ರ ಹರೆಯದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ದೂರಿನಂತೆ ಆರೋಪಿಯ ವಿರುದ್ಧ ವಿದ್ಯಾನಗರ ಪೊಲೀಸರು  ಪೋಕ್ಸೋ ಕಾನೂನುಪ್ರಕಾರ ಪ್ರಕರಣ ದಾಖಲಿಸಿಕೊಂ ಡಿದ್ದರು. ಆ ಬಳಿಕ ಆರೋಪಿ ತಲೆಮರೆಸಿಕೊಂ ಡಿದ್ದನು.  ಆತ ಎರ್ನಾಕುಳಂನಲ್ಲಿರುವುದಾಗಿ ಬಳಿಕ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಅದರಂತೆ ವಿದ್ಯಾನಗರ ಠಾಣೆ ಇನ್‌ಸ್ಪೆಕ್ಟರ್ ವಿನೀಶ್ ಕುಮಾರ್‌ರ ನಿರ್ದೇಶದಂತೆ ಎಸ್‌ಐ  ಸಫ್ವಾನ್, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್  ವಾಹೀದ್,  ಸಿವಿಲ್ ಪೊಲೀಸ್ ಆಫೀಸರ್‌ಗಳಾದ ಸಜೇಶ್, ಉಣ್ಣಿಕೃಷ್ಣನ್ ಮತ್ತು ಸನೀಶ್ ಜೋಸೆಫ್‌ರನ್ನೊಳಗೊಂಡ ಪೊಲೀಸರ ತಂಡ ಆರೋಪಿಯನ್ನು ಎರ್ನಾಕುಳಂ ನಿಂದ ಬಂಧಿಸಿ, ವಿದ್ಯಾನಗರ ಠಾಣೆಗೆ ತಂದಿದ್ದಾರೆ. ಆತನನ್ನು ಇಂದು ನ್ಯಾಯಾಲಯದಲ್ಲಿ  ಹಾಜರುಪಡಿ ಸುವುದಾಗಿ ಪೊಲೀಸರು ತಿಳಿಸಿದ್ದರೆ.

RELATED NEWS

You cannot copy contents of this page