16ರ ಬಾಲಕಿಗೆ ಕಾಸರಗೋಡು ವಸತಿಗೃಹದಲ್ಲಿ ದೌರ್ಜನ್ಯ: ವ್ಲೋಗರ್ ವಿರುದ್ಧ ಪೋಕ್ಸೋ ಕೇಸು

ಕಾಸರಗೋಡು: ಕೊಲ್ಲಂ ನಿವಾಸಿಯಾದ 16ರ ಹರೆಯದ ಬಾಲಕಿಗೆ ಕಾಸರಗೋಡು ನಗರದ ವಸತಿಗೃಹದಲ್ಲಿ ದೌರ್ಜನ್ಯಗೈದ ಬಗ್ಗೆ ನೀಡಿದ ದೂರಿನಂತೆ ವ್ಲೋಗರ್ ವಿರುದ್ಧ ನಗರ ಠಾಣೆ ಪೊಲೀಸರು ಪೋಕ್ಸೋ ಕೇಸು ದಾಖಲಿಸಿದ್ದಾರೆ. ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಿರುವ 36ರ ಹರೆಯದ ವ್ಯಕ್ತಿ ವಿರುದ್ಧ ಕೇಸು ದಾಖಲಿಸಲಾಗಿದೆ. ದೂರುದಾರೆಯಾದ ಬಾಲಕಿ ಮಂಗಳೂರಿನ ಒಂದು ಜಿಮ್‌ನಲ್ಲಿ ವ್ಲೋಗರ್ ಆದ ಈತನನ್ನು ಪರಿಚಯಗೊಂಡಿದ್ದಳು. ಬಳಿಕ ಇವರಿಬ್ಬರೂ ಗೆಳೆತನ ಹೊಂದಿದರು. ಅದರ ಬಳಿಕ ಬಾಲಕಿಯನ್ನು ಕಾಸರಗೋಡಿಗೆ ಕರೆತಂದು ವಸತಿಗೃಹದಲ್ಲಿ ದೌರ್ಜನ್ಯಗೈದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

RELATED NEWS

You cannot copy contents of this page