ಮಾದಕವಸ್ತು ಪ್ರಕರಣದ ಆರೋಪಿ ಮುಂಜಾಗ್ರತಾ ಕ್ರಮದಂಗವಾಗಿ ಸೆರೆ

ಕುಂಬಳೆ: ಮಾದಕವಸ್ತು ಪ್ರಕರಣದಲ್ಲಿ ಈ ಹಿಂದೆ ಸೆರೆಗೀಡಾಗಿದ್ದ ಆರೋಪಿಯನ್ನು ಕುಂಬಳೆ ಪೊಲೀಸರು ಇದೀಗ ಮುಂಜಾಗ್ರತಾ ಕ್ರಮದಂಗವಾಗಿ ಸೆರೆಹಿಡಿದು ಪಿಟ್ ಎನ್‌ಡಿಪಿಎಸ್ ಆಕ್ಟ್ ಪ್ರಕಾರ ಕೇಸು ದಾಖಲಿಸಿ ಕೊಂಡಿದ್ದಾರೆ.ಕುಂಬಳೆ ಕೊಯಿಪ್ಪಾಡಿ ಕಡಪ್ಪುರ ಶಫೀರ ಮಂಜಿಲ್‌ನ ಸಾದಿಕ್ ಕೆ (34) ಎಂಬಾತನನ್ನು ಕುಂಬಳೆ ಠಾಣೆ ಇನ್‌ಸ್ಪೆಕ್ಟರ್ ಬೈಜು ಕೆ ಜೋಸ್,  ಎಸ್‌ಐ  ಗಳಾದ ಕೆ. ಸನಿತ್, ಅನಂತಕೃಷ್ಣನ್ ಆರ್ ಮೆನೋನ್ ನೇತೃತ್ವದಲ್ಲಿ ಸೆರೆಹಿಡಿಯಲಾಗಿದೆ.2025 ಡಿಸೆಂಬರ್ 6ರಂದು ಕುಂಬಳೆ ಪೊಲೀಸರು ಉಪ್ಪಳ ಸೋಂಕಾಲ್‌ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 43.77 ಗ್ರಾಂ ಎಂಡಿಎಂಎ ಮಾದಕವಸ್ತುವನ್ನು ವಶಪಡಿಸಿಕೊಂಡಿದ್ದರು.  ಈ ಸಂಬಂಧ ಇಧೀಗ ಸೆರೆಗೀಡಾದ ಸಾದಿಕ್ ಸಹಿತ ಮೂವರನ್ನು ಬಂಧಿಸಿದ್ದರು. ಬಳಿಕ ಸಾದಿಕ್ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದನು. ಅನಂತರ ಹಲವು ಮಾದಕವಸ್ತು ಪ್ರಕರಣಗಳಲ್ಲಿ ಈತ ಆರೋಪಿಯಾಗಿದ್ದಾನೆಂದೂ ಈ ಹಿನ್ನೆಲೆಯಲ್ಲಿ  ಇದೀಗ ಮುಂಜಾಗ್ರತಾ ಕ್ರಮದಂಗವಾಗಿ ಸೆರೆಹಿಡಿಯಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.
 

RELATED NEWS

You cannot copy contents of this page