ಹಿರಿಯ ಟೈಲರ್ ಬಾಲಕೃಷ್ಣ ಶೆಟ್ಟಿ ಕರಿಪ್ಪಾರ ನಿಧನ

ಕುಂಬಳೆ: ಕುಂಬಳೆಯ ಹಿರಿಯ ಟೈಲರ್  ಮೀಂಜ ಕುಳೂರು ಕರಿಪ್ಪಾರ ನಿವಾಸಿ ಬಾಲಕೃಷ್ಣ ಶೆಟ್ಟಿ  (62) ನಿಧನಹೊಂದಿದರು. ಇವರು ಕುಂಬಳೆಯ ಮೋಹನ್ ಟೈಲರ್ಸ್ ಎಂಬ ಟೈಲರಿಂಗ್ ಸಂಸ್ಥೆಯಲ್ಲಿ ಕಟ್ಟಿಂಗ್ ಮಾಸ್ತರ್ ಆಗಿದ್ದರು. ಕಿಡ್ನಿ ಸಂಬಂಧ ಸೌಖ್ಯ ಬಾಧಿಸಿದ್ದ ಇವರನ್ನು ಪರಿಯಾರಂನ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸ ಲಾಗಿತ್ತು.  ನಿನ್ನೆ ಸಂಜೆ ಹೃದಯಾ ಘಾತದಿಂದ ನಿಧನ ಸಂಭವಿಸಿದೆ.

ಕೇರಳ ಸ್ಟೇಟ್ ಟೈಲರ್ಸ್  ಅಸೋಸಿಯೇಶನ್‌ನ ಮಾಜಿ ರಾಜ್ಯ ಸಮಿತಿ ಸದಸ್ಯರಾಗಿದ್ದ ಬಾಲಕೃಷ್ಣ ಶೆಟ್ಟಿಯವರು ಪ್ರಸ್ತುತ ಜಿಲ್ಲಾ ಸಮಿತಿ ಸದಸ್ಯನಾಗಿದ್ದರು.

ಮೃತರು ಪತ್ನಿ ಶ್ಯಾಮಲ, ಮಕ್ಕಳಾದ ಪುಷ್ಪರಾಜ್, ಜಯ ರಾಜ್, ವಿಶ್ವರಾಜ್, ಸೊಸೆ ಪ್ರಿಯಾ, ಸಹೋದರ-ಸಹೋದರಿಯರಾದ ಯತೀಶ್ ಶೆಟ್ಟಿ, ಶಿವಪ್ರಸಾದ್ ಶೆಟ್ಟಿ, ಸುಮತಿ, ಜ್ಯೋತಿ, ವಿಜಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page