ಕಾಸರಗೋಡು: ಪೆರ್ಲ ಬಳಿಯ ಕುರಿಯಡ್ಕದಲ್ಲಿ ಮನೆಯಿಂದ ಕಳ್ಳಕೋವಿ ಹಾಗೂ ಮದ್ದುಗುಂಡುಗಳ ಸಹಿತ ಸೆರೆಗೀಡಾದ ವ್ಯಕ್ತಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಕುರಿಯಡ್ಕ ನಿವಾಸಿ ಕೃಷ್ಣಪ್ಪ ನಾಯ್ಕ್‌ಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಬದಿಯಡ್ಕ ಪೊಲೀಸರು ಮೊನ್ನೆ ನಡೆಸಿದ ದಾಳಿ ವೇಳೆ ಕೃಷ್ಣಪ್ಪ ನಾಯ್ಕನ ಮನೆಯಿಂದ ಕಳ್ಳಕೋವಿ, ಎರಡು ಮದ್ದುಗುಂಡುಗಳು ಹಾಗೂ ೪೨ ಖಾಲಿ ಕೇಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಕೃಷ್ಣಪ್ಪ ನಾಯ್ಕ್‌ನನ್ನು ಬಂಧಿಸಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯ ಭರತ್ ರೆಡ್ಡಿಗೆ ಲಭಿಸಿದ ಗುಪ್ತ ಮಾಹಿತಿಯಂತೆ ಬದಿಯಡ್ಕ ಪೊಲೀಸ್ ಇನ್‌ಸ್ಪೆಕ್ಟರ್ ಎ. ಸಂತೋಷ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಎಎಸ್‌ಐ ಪ್ರದೀಪ್ ಗೋಪಾಲ್, ಎಸ್‌ಐ ಸವ್ಯಸಾಚಿ, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಭಾಸ್ಕರ್, ಗೋಕುಲ್, ಸಿಪಿಒಗಳಾದ ಪ್ರಸೀತ, ಬಿಜಿ ಲಾಲ್ ಎಂಬಿವರು ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡದಲ್ಲಿದ್ದರು. ಖಾಲಿಯಾದ ೪೨ ಮದ್ದುಗುಂಡು ಕೇಸ್‌ಗಳನ್ನು ಯಾಕಾಗಿ ಉಪಯೋಗಿಸಲಾ ಗಿದೆಯೆಂದು ತಿಳಿದುಬಂದಿಲ್ಲ. ಈ ಕುರಿತಾಗಿ ತನಿಖೆ ಮುಂದುವರಿಸಲಾ ಗಿದೆಯೆಂದು ಪೊಲೀಸರು ತಿಳಿಸಿ ದ್ದಾರೆ. ಇತ್ತೀಚೆಗೆ ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಯೋಟ್‌ನಲ್ಲಿ ನಡೆಸಿದ ತಪಾಸಣೆ ವೇಳೆ ಕಳ್ಳಕೋವಿ ಪತ್ತೆಹಚ್ಚಲಾಗಿದೆ. ತ್ರಿಸ್ತರ ಪಂ. ಚುನಾವಣೆಯಂಗವಾಗಿ ಮುಂದಿನ ದಿನಗಳಲ್ಲಿ ತಪಾಸಣೆ ಮುಂದುವರಿಯ ಲಿದೆಯೆಂದು ಪೊಲೀಸ್ ಮೂಲಗಳು ತಿಳಿಸಿವೆ.






