ಅಂಗಡಿಮೊಗರು ಒಡುವಾರು ಅಮಾನತ್ತುಲ್ ಇಸ್ಲಾಂ ಮದ್ರಸ ವಾರ್ಷಿಕ ನಾಳೆಯಿಂದ

ಕುಂಬಳೆ: ಅಂಗಡಿಮೊಗರು ಒಡುವಾರು ಅಮಾನತ್ತುಲ್ ಇಸ್ಲಾಂ ಮದ್ರಸ ವಾರ್ಷಿಕ ಹಾಗೂ ಮತ ವಿಜ್ಞಾನ ಸದಸ್ ನಾಳೆಯಿಂದ 13ರವರೆಗೆ ಒಡುವಾರು ಬದರ್ ಜುಮಾ ಮಸೀದಿಯಲ್ಲಿ ನಡೆಯಲಿದೆ ಎಂದು ಸಂಬಂಧಪಟ್ಟವರು ಸುದ್ಧಿಗೋಷ್ಠಿ ಯಲ್ಲಿ ತಿಳಿಸಿದ್ದಾರೆ. ನಾಳೆ ರಾತ್ರಿ 7 ಗಂಟೆಗೆ ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್ ಉದ್ಘಾಟಿಸು ವರು. ಡಾ. ಫರೂಕ್ ನಯಿಮಿ ಕೊಲ್ಲಂ ಹಿಜ್ರ ಎಕ್ಸ್‌ಪೆಡಿಶನ್ ನಿರ್ವಹಿಸುವರು. ಆದಿತ್ಯವಾರ, ಸೋಮವಾರ ರಾತ್ರಿ 8 ಗಂಟೆಗೆ ಸುಬೈರ್ ಮಾಸ್ಟರ್ ತೊಟ್ಟಿಕ್ಕಲ್ ಹಾಗೂ ತಂಡದವರಿಂದ ಇಸ್ಲಾಮಿಕ ಕಥಾ ಪ್ರವಚನ ನಡೆಯಲಿದೆ. ಮಂಗಳವಾರ ರಾತ್ರಿ 8 ಗಂಟೆಗೆ ನೌಶಾದ್ ಬಾಖವಿ ಚಿರಯನ್‌ಕೀಳ್ ಧಾರ್ಮಿಕ ಪ್ರವಚನ ನಡೆಸುವರು.

13ರಂದು ಸಂಜೆ 4 ಗಂಟೆಗೆ ಪ್ರವಾಸಿ ಮೀಟ್, ಸಾಂಸ್ಕೃತಿಕ ಸಮ್ಮೇಳನ ನಡೆಯಲಿದೆ. ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸುವರು. ಜಿಲ್ಲಾ ಪಂ. ಸದಸ್ಯ ಸೋಮಶೇಖರ ಜೆ.ಎಸ್, ಬ್ಲೋಕ್ ಪಂ. ಸದಸ್ಯ ಬಶೀರ್ ಕೊಟ್ಟೂಡಲ್, ಪಂ. ಸದಸ್ಯ ಶ್ರೀನಿವಾಸನ್ ಭಾಗವಹಿಸುವರು. ಬಳಿಕ ಸ್ವಲಾತ್ ವಾರ್ಷಿಕ, ಪ್ರಾರ್ಥನಾ ಸದಸ್ ನಡೆಯಲಿದೆ. ಖತೀಬ್ ಸಲಾಂ ಫೈಸಿ ಉದ್ಘಾಟಿಸುವರು. ರಾಶಿದ್ ಹಿಮಾಮಿ ಸಖಾಫಿ ಪಳ್ಳತ್ತೂರು ನೇತೃತ್ವ ನೀಡುವರು. ಈ ಬಗ್ಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸಂಬಂಧಪಟ್ಟವರು ಭಾಗವಹಿಸಿದರು.

You cannot copy contents of this page