ಕಾಸರಗೋಡು: ಮೆಡೋನ್ಹಾ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ಅನ್ಶಿಕ ಎಂ. ಏಷ್ಯನ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ. ಯೋಗದಲ್ಲಿ ಅತ್ಯಂತ ಕ್ಲಿಷ್ಟಕರ ಆಸನವಾದ ಪತಂಗಾಸನವನ್ನು ಒಂದು ನಿಮಿಷ 35 ಸೆಕೆಂಡ್ ಕೈಗೊಂಡು, ಕೌಂಟಿನ್ಯಾಸನದಲ್ಲಿ ಎರಡು ನಿಮಿಷ ಯೋಗ ಕೈಗೊಂಡು ಈಕೆ ಏಷ್ಯನ್ ಬುಕ್ ಆಫ್ ರೆಕಾರ್ಡ್ಸ್ ಪಡೆದುಕೊಂಡಿದ್ದಾಳೆ. ಕರಂದಕ್ಕಾಡ್ ಯೋಗ ಫಾರ್ ಕಿಡ್ಸ್‌ನಲ್ಲಿ ಯೋಗ ತರಬೇತಿ ಪಡೆಯುತ್ತಿರುವ ಈಕೆಗೆ ಅಧ್ಯಾಪಿಕೆ ತೇಜ ಕುಮಾರಿ ಯೋಗ ತರಬೇತಿ ನೀಡುತ್ತಿದ್ದಾರೆ. ಕುತ್ತಿಕ್ಕೋಲ್ ವಳವ್‌ನ ಬಾಲಕೃಷ್ಣನ್- ಪ್ರದೀಪ ದಂಪತಿ ಪುತ್ರಿಯಾಗಿದ್ದಾಳೆ.






