ಕುಂಬಳೆ ಭಾಸ್ಕರನಗರದಲ್ಲಿ ಕಾರು ಅಪಘಾತ: ಪ್ರಯಾಣಿಕರು ಅಪಾಯದಿಂದ ಪಾರು

ಕುಂಬಳೆ: ಕುಂಬಳೆ-ಮುಳ್ಳೇರಿಯ ಕೆಎಸ್‌ಟಿಪಿ ರಸ್ತೆಯ ಭಾಸ್ಕರ ನಗರದಲ್ಲಿ ಮತ್ತೆ ವಾಹನ ಅಪಘಾತ ಸಂಭವಿಸಿದೆ.   ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಜಲಪ್ರಾಧಿಕಾರದ ಪೈಪಿಗೆ ಢಿಕ್ಕಿ ಹೊಡೆ ದಿದೆ. ಇದರಿಂದ  ಕಾರಿನ ಮುಂಭಾಗ ಪೂರ್ಣವಾಗಿ ಹಾನಿಗೀಡಾಗಿದೆ. ಕಾರಿ ನಲ್ಲಿದ್ದ  ಮುಳ್ಳೇರಿಯ ನಿವಾಸಿಗಳಾದ ಪ್ರಯಾಣಿಕರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.

ನಿನ್ನೆ ಮಧ್ಯಾಹ್ನ ವೇಳೆ ಅಪ ಘಾತವುಂಟಾಗಿದೆ. ಮುಳ್ಳೇರಿಯದಿಂದ  ಕುಂಬಳೆ ಭಾಗಕ್ಕೆ ತೆರಳುತ್ತಿದ್ದ ಕಾರು ಭಾಸ್ಕರ ನಗರಕ್ಕೆ ತಲುಪುತ್ತಿದ್ದಂತೆ ನಿಯಂತ್ರಣ ಕಳೆದುಕೊಂಡು ಅಪ ಘಾತಕ್ಕೀಡಾಗಿದೆ.  ಈ ಹಿಂದೆಯೂ ಇದೇ ಸ್ಥಳದಲ್ಲಿ ಹಲವು ವಾಹನಗಳು ಅಪಘಾತಕ್ಕೀಡಾಗಿವೆ. ಇಲ್ಲಿ ಪದೇ ಪದೇ ವಾಹನ ಅಪಘಾತಗಳು ಸಂಭವಿಸುತ್ತಿರುವುದು ಸ್ಥಳೀಯರಿಗೆ ಹಾಗೂ ವಾಹನ ಪ್ರಯಾಣಿಕರಿಗೆ ಆತಂಕವಾಗಿ ಪರಿಣಮಿಸಿದೆ.

You cannot copy contents of this page