ಕರ್ಕಾಟಕ ಅಮವಾಸ್ಯೆ: ಪಿತೃತರ್ಪಣಕ್ಕೆ ಕ್ಷೇತ್ರಗಳಲ್ಲಿ ಸಿದ್ಧತೆ

ಕಾಸರಗೋಡು:  ಕರ್ಕಾಟಕ ಅಮವಾಸ್ಯೆ ಹಿನ್ನೆಲೆಯಲ್ಲಿ ಪಿತೃತರ್ಪಣ ನಡೆಸುವುದಕ್ಕೆ ತೀರ್ಥ ಕ್ಷೇತ್ರಗಳು ಸಿದ್ಧತೆನಡೆಸುತ್ತಿವೆ. ದಕ್ಷಿಣಕಾಶಿ ಎಂದೇ ಕರೆಯಲ್ಪಡುವ ತೃಕ್ಕನ್ನಾಡ್ ಶ್ರೀ ತ್ರಯಂಬಕೇಶ್ವರ ಕ್ಷೇತ್ರದಲ್ಲಿ ಬಲಿತರ್ಪಣ 12ರಂದು ಬೆಳಿಗ್ಗೆ 5.30ರಿಂದ ಆರಂಭಗೊಳ್ಳಲಿದೆ. ಅರ್ಚಕ ನವೀನ್‌ಚಂದ್ರ ಕಾಯರ್‌ತ್ತಾಯ, ಪುರೋಹಿತ ರಾಜೇಂದ್ರ ಅರಳಿತ್ತಾಯ ಎಂಬಿವರು ನೇತೃತ್ವ ನೀಡುವರು. ೨೦ರಷ್ಟು ವೈದಿಕರು ಇಲ್ಲಿ ಬಲಿತರ್ಪಣ ನಡೆಸಿಕೊಡುವರು.

ಭಕ್ತರಿಗೆ ಕುಡಿಯುವ ನೀರು, ಔಪಹಾರ, ಪೊಲೀಸ್, ಹೆಲ್ತ್ ವಿಭಾಗಗಳ ಸೇವೆ, ಸಾರಿಗೆ ಸೌಕರ್ಯ ಎಂಬಿವುಗಳನ್ನು ಏರ್ಪಡಿಸಲಾಗಿದೆ. ತೃಕ್ಕನ್ನಾಡ್ ಹೊರತಾಗಿ ಚಟ್ಟಂಚಾಲ್ ಶ್ರೀ ಮಹಿಷ ಮರ್ದಿನಿ ಕ್ಷೇತ್ರ ತ್ರಿವೇಣಿ ಸಂಗಮ, ನೀಲೇಶ್ವರ ಮರಕ್ಕಾಪು ಕಡಪ್ಪುರ, ಅಟ್ಟೆಂಗಾನಂ ಬೇಳೂರು ಶಿವಕ್ಷೇತ್ರ, ಉದಯಪುರ ದುರ್ಗಾಭಗವತಿ ಕ್ಷೇತ್ರ, ವೆಳ್ಳರಿಕುಂಡ್ ಅಡುಕ್ಕಳಕುನ್ ಭಗವತೀ ಕ್ಷೇತ್ರ ಎಂಬೆಡೆಗಳಲ್ಲೂ ಪಿತೃತರ್ಪಣ ನಡೆಯಲಿದೆ.

RELATED NEWS

You cannot copy contents of this page