ವಿಶೇಷ ಚೇತನ ಮಕ್ಕಳ ಕಲಾಮೇಳ ಸಮಾಪ್ತಿ

ಮಂಜೇಶ್ವರ: ಹಾಸಿಗೆಯಲ್ಲೇ ಇರುವ ವಿಶೇಷಚೇತನ ಮಕ್ಕಳ ಸಾಮಾಜಿಕ ಒಳಗೊಳ್ಳುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಸಮಗ್ರ ಶಿಕ್ಷಣ ಕಾಸರಗೋಡು ಮತ್ತು ಕಾಸರಗೋಡು ಜಿಲ್ಲಾ ಪಂಚಾಯತ್ ಸಂಯುಕ್ತವಾಗಿ ಸ್ಪರ್ಶಂ ವಿಶೇಷ ಚೇತನ ಮಕ್ಕಳ ಕಲಾಮೇಳವನ್ನು ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಸಮಗ್ರ ಶಿಕ್ಷಣ ಕಾಸರಗೋಡು ಡಿ.ಪಿ.ಓ.ಪ್ರಕಾಶನ್ ಟಿ ಕ್ಯಾಂಪ್ ಉದ್ಘಾಟಿಸಿದರು. ಮಂಜೇಶ್ವರ ಎ.ಇ.ಒ ಜಾರ್ಜ್ ಕ್ರಾಸ್ಟ್ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ಜಿಲ್ಲೆಯ ಶಿಕ್ಷಣಾಧಿಕಾರಿಗಳಾದ ಡಿ.ಡಿ.ಇ ಇಬ್ರಾಹಿಂ ಬಿ, ಎ.ಎಸ್. ಎಸ್.ಕೆ ಯ ಡಿ.ಪಿ.ಓ. ಅಗಸ್ಟಿನ್ ಬರ್ನಾರ್ಡ್ ಮೊಂತೆರೋ ಹಾಗೂ ಮಂಜೇಶ್ವರ ಎ.ಇ.ಒ ಜಾರ್ಜ್ ಕ್ರಾಸ್ತ ಸಿ.ಎಚ್ ಉಪಸ್ಥಿತರಿದ್ದರು.
ಪ್ರಸಿದ್ಧ ಜನಪದ ಗಾಯಕ ಹಾಗೂ ಯುವ ಪ್ರತಿಭಾ ಪ್ರಶಸ್ತಿ ಪುರಸ್ಕೃತ ಶೈಜು ಬೆರಿಕ್ಕುಳಂ ಹಾಗೂ ಕಲಾಭವನ ಮಣಿ ಫೌಂಡೇಶನ್‌ನ ಓಡಪ್ಪಳಂ ಪ್ರಶಸ್ತಿ ಪುರಸ್ಕೃತ ಪ್ರವೀಣ್ ಪೂಂಗೋಡ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಜನಪದ ಕಲಾಮೇಳ ಹಾಗೂ ಮಕ್ಕಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆಯಿತು. ಮಂಜೇಶ್ವರ ಬಿ.ಆರ್ ಸಿ ಯ ಬಿ.ಪಿ.ಸಿ. ರಾಜಗೋ ಪಾಲನ್ ಪಿ ಬಹುಮಾನ ವಿತರಿಸಿ ದರು. ಸ್ಪೆಷಲ್ ಎಜುಕೇಟರ್‌ಗಳು, ತಜ್ಞ ಶಿಕ್ಷಕರು ಮತ್ತು ಕ್ಲಸ್ಟರ್ ಸಂಯೋಜಕರು ಸಹಕರಿಸಿದರು. ಸಿಆರ್‌ಸಿ ಸಂಯೋಜಕ ನಾರಾಯಣರಾಜ್ ವಂದಿಸಿದರು.

RELATED NEWS

You cannot copy contents of this page