17ರ ಬಾಲಕಿ ಮಗುವಿಗೆ ಜನ್ಮ : 18ರ ಯುವಕನ ವಿರುದ್ಧ ಪೋಕ್ಸೋ ಕೇಸು

ಕಾಸರಗೋಡು: ದೌರ್ಜನ್ಯಕ್ಕೀಡಾದ 17ರ ಹರೆಯದ ಬಾಲಕಿ ಮಗುವಿಗೆ ಜನ್ಮ ನೀಡಿದಳು. ಘಟನೆಯಲ್ಲಿ 18ರ ಹರೆಯದ ಯುವಕನ ವಿರುದ್ಧ ಕುಂಬಳೆ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿದ್ದಾರೆ. ಎರಡು ತಿಂಗಳ ಹಿಂದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ. ಈ ಮಾಹಿತಿ ಬಹಿರಂಗಪಡಿಸಿರಲಿಲ್ಲ. ಆದರೆ ಎರಡು ದಿನದ ಹಿಂದೆ ಪೊಲೀಸರಿಗೆ ಲಭಿಸಿದ ರಹಸ್ಯ ಮಾಹಿತಿ ಆಧಾರದಲ್ಲಿ ನಡೆಸಿದ ತನಿಖೆಯಲ್ಲಿ ವಿಷಯ ತಿಳಿದು ಬಂದಿದೆ. ಸಮಗ್ರವಾದ ತನಿಖೆಯಿಂದ ಘಟನೆಯನ್ನು ಖಚಿತಪಡಿಸಿದ ಬಳಿಕ ಪೋಕ್ಸೋ ಕೇಸು ದಾಖಲಿಸಲಾಗಿದೆ. ನವಜಾತ ಶಿಶು ಬಾಲಕಿಯ ಸಂಬಂಧಿಕರ ಆರೈಕೆಯಲ್ಲಿ ಇದೆ ಎಂಬ ಬಗ್ಗೆ ಪೊಲೀಸರಿಗೆ  ಮಾಹಿತಿ ಲಭಿಸಿದೆ.

RELATED NEWS

You cannot copy contents of this page