ಪೊಲೀಸ್ ಜೀಪಿಗೆ ಕಾರು ತಡೆಯೊಡ್ಡಿ ದಾಳಿಗೆ ಯತ್ನ: ಓರ್ವ ಸೆರೆ

ಕಾಸರಗೋಡು:  ಪೊಲೀಸ್ ಜೀಪಿಗೆ ಕಾರನ್ನು ಅಡ್ಡವಾಗಿ ನಿಲ್ಲಿಸಿ ಪೊಲೀಸರ ಕರ್ತವ್ಯ ನಿರ್ವಹಣೆಗೆ ತಡೆಯೊಡ್ಡಿದ ಆರೋಪದಂತೆ ಹೊಸದುರ್ಗ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.

ಪಡನ್ನಕ್ಕಾಡ್ ನಿವಾಸಿ ಟಿ.ವಿ. ಸುರೇಶನ್ (48) ಎಂಬಾತನನ್ನು ಈ ಆರೋಪದಂತೆ ಸೆರೆಹಿಡಿದು ಪ್ರಕರಣ ದಾಖಲಿಸಲಾಗಿದೆ. ಪಡನ್ನಕ್ಕಾಡಿನ ಬೇಕಲ ಕ್ಲಬ್‌ನಲ್ಲಿ ಜೂಜಾಟ ನಡೆಸುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯಂತೆ ಹೊಸದುರ್ಗ ಪೊಲೀಸರು ಅಲ್ಲಿಗೆ ನಿನ್ನೆ ದಾಳಿ ನಡೆಸಿದ್ದರು. ದಾಳಿ ಬಳಿಕ ಪೊಲೀಸರು ತಮ್ಮ ಜೀಪಿನಲ್ಲಿ ಹಿಂತಿರುಗುತ್ತಿದ್ದ ವೇಳೆ ಕಾರನ್ನು ಪೊಲೀಸರ ಜೀಪಿಗೆ ಅಡ್ಡವಾಗಿ ನಿಲ್ಲಿಸಿ  ಪೊಲೀಸರ ಮೇಲೆ ಹಲ್ಲೆ ನಡೆಸಲೆತ್ನಿಸಿದ ಹಾಗೂ ಅವರ ಕರ್ತವ್ಯ ನಿರ್ವಹಣೆಗೆ ಅಡಚಣೆ ಸೃಷ್ಟಿಸಿದ ಆರೋಪದಂತೆ ಸುರೇಶ್‌ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಜಿಲ್ಲಾ ಎಸ್‌ಪಿಯವರ ಡಾನ್ಸಾಫ್ ತಂಡದ ಪೊಲೀಸರಾದ ರಾಹುಲ್, ರಜೀಶ್ ಕಾಟಾಂಬಳಿ, ಹೊಸದುರ್ಗ ಪೊಲೀಸ್ ಠಾಣೆ ಪೊಲೀಸ್ ವಿ.ಪಿ. ರತೀಶ್ ಎಂಬವರು ಈ ಘಟನೆಯಲ್ಲಿ ಗಾಯಗೊಂಡಿದ್ದು,  ಇವರನ್ನು ನಂತರ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತು. ಬಂಧಿತನನ್ನು ನ್ಯಾಯಾಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

RELATED NEWS

You cannot copy contents of this page