ಪರಿಸರ ಮಲಿನೀಕರಣಗೊಳಿಸಿದಲ್ಲಿ ೩೦,೦೦೦ ರೂ. ದಂಡ
ಕಾಸರಗೋಡು: ಪರಿಸರ ಮಲಿನೀಕರಣಗೊಳಿಸಿ ಆ ಮೂಲಕ ಸಾಂಕ್ರಾಮಿಕ ರೋಗ ಹರಡುವಂತೆ ಮಾಡಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವುದನ್ನು ತಡೆಗಟ್ಟುವ ಗುರಿಯೊಂದಿಗೆ ರೂಪು ನೀಡಲಾದ ರಾಜ್ಯ ಸಾರ್ವಜನಿಕ ಆರೋಗ್ಯ ಕಾನೂನನ್ನು ರಾಜ್ಯದಲ್ಲಿ ವಿದ್ಯುಕ್ತವಾಗಿ ಜ್ಯಾರಿಗೊಳಿಸಲಾಗಿದೆ. ಈ ಬಗ್ಗೆ ಸರಕಾರ ಅಧಿಸೂಚನೆ ಯನ್ನೂ ಜ್ಯಾರಿಗೊಳಿಸಿದೆ. ಇದರಂತೆ ಸಾರ್ವಜನಿಕ ಪ್ರದೇಶಗಳು, ಜನನಿಬಿಡ ಪ್ರದೇಶಗಳು, ರಸ್ತೆ ಬದಿ ಮಾತ್ರವಲ್ಲ ಖಾಸಗಿ ಪ್ರದೇಶಗಳಲ್ಲೂ ತ್ಯಾಜ್ಯಗಳನ್ನು ತಂದೆಸೆಯುವವರು ಮತ್ತು ಮಲೀನ ಜಲ ಹರಿಯಬಿಡುವವರಿಗೆ ಸಂಬಂಧಪಟ್ಟ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಮೊದಲು ನೋಟೀಸು ಜ್ಯಾರಿಗೊಳಿಸಲಿದೆ. ಅದರಲ್ಲಿ ಸೂಚಿಸುವ …