ಸೂರ್ಯನಿಗೇ ಸವಾಲು: ಮಂಗಲ್ಪಾಡಿ ಪಂ. ವ್ಯಾಪ್ತಿಯಲ್ಲಿ ಹಗಲಿಡೀ ಉರಿಯುತ್ತಿರುವ ಬೀದಿ ದೀಪಗಳು

ಉಪ್ಪಳ: ಹಗಲಿನ ಸೂರ್ಯ ಪ್ರಕಾಶಕ್ಕೆ ಸವಾಲೊಡ್ಡುವ ರೀತಿಯಲ್ಲಿ ಮಂಗಲ್ಪಾಡಿ ಪಂಚಾಯತ್‌ನ ವಿವಿಧ ಕಡೆಗಳಲ್ಲಿ ಬೀದಿ ದೀಪಗಳು ಉರಿಯುತ್ತಿರುವುದು ಕಂಡುಬಂದಿದೆ. ಹಗಲೂರಾತ್ರಿ ತಿಂಗಳುಗಳಿಂದ ಸತತವಾಗಿ  ಲೋ ಮಾಸ್ಟ್ ಬೀದಿ ದೀಪಗಳು ಉರಿಯುತ್ತಿದ್ದು ಇದನ್ನು ನಿಯಂತ್ರಿಸಲು ಪಂಚಾಯತ್‌ನಲ್ಲಿ ಯಾರೂ ಮುಂದಾಗದಿರುವುದು ಕಂಡು ಬಂದಿದೆ. ಪೆರಿಂಗಡಿ ರಸ್ತೆಯ ಜನಪ್ರಿಯ ಎಂಬಲ್ಲಿ ಸರ್ವೀಸ್ ರಸ್ತೆ ಬದಿಯಲ್ಲಿ ಹಾಗೂ ಕುಬಣೂರು ರಸ್ತೆಯ ಪುಳಿಕುತ್ತಿ ಸ್ಮಶಾನದ ಬಳಿ ಕಳೆದ ಒಂದು ತಿಂಗಳಿಂದ ಸತತವಾಗಿ  ಲೋ ಮಾಸ್ಟ್ ಬೀದಿ ದೀಪ ಉರಿಯುತ್ತಿದೆ. ಇದೇ ರೀತಿ ಪಂಚಾಯತ್ ವ್ಯಾಪ್ತಿಯ …

ಕೇರಳದ ಎಲ್ಲಾ ಸರಕಾರಿ ಸೇವೆಗಳಿಗಾಗಿ ಬರಲಿದೆ ಖಾಯಂ ರಾಜ್ಯ ಗುರುತು ಚೀಟಿ

ತಿರುವನಂತಪುರ: ಕೇರಳದ ಎಲ್ಲಾ ಸರಕಾರಿ ಸೇವೆಗಳಿಗಾಗಿ ಬರಲಿದೆ ಖಾಯಂ ಗುರುತುಚೀಟಿ. ಮುಖ್ಯಮಂತ್ರಿ ಪಿಣರಾಯಿ ವಿಜಯನ್  ಈ ವಿಷಯ ತಿಳಿಸಿದ್ದಾರೆ. ಕೇರಳದಲ್ಲಿ ಜನಿಸಿದವರೆಂಬುವುದನ್ನು ಸಾಬೀತುಪಡಿಸಲು ಒಂದು ಅಧಿಕೃತ ಗುರುತು ಚೀಟಿಯಾಗಿ ಫೋಟೋ ಲಗತ್ತಿಸಿದ ಇಂತಹ ನೇಟಿವಿಟಿ ಕಾರ್ಡ್ ವಿತರಿಸಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನ ಕೈಗೊಂಡಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಆದರೆ ಇದು ಒಂದು ಕಾನೂನಾತ್ಮಕ ದಾಖಲುಪತ್ರವಲ್ಲವೆಂದೂ ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ. ಈ ಕಾರ್ಡನ್ನು ಸರಕಾರದ ಎಲ್ಲಾ ಸೇವೆಗಳಿಗಾಗಿ ಉಪಯೋಗಿಸಬಹುದಾಗಿದೆ. ನೇಟಿವಿಟಿ ಸರ್ಟಿಫಿಕೇಟಿನ ಪರ್ಯಾಯವಾಗಿ ಇದನ್ನು …

ಬದಿಯಡ್ಕ ಪಂ. ವಿಜೇತ ಬಿಜೆಪಿ ಅಭ್ಯರ್ಥಿಗಳಿಂದ ಎಡನೀರು ಶ್ರೀ ಭೇಟಿ

 ಬದಿಯಡ್ಕ: ಇತ್ತೀಚೆಗೆ ನಡೆದ ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ ವಿಜೇತ ಬಿಜೆಪಿ ಅಭ್ಯರ್ಥಿಗಳು ಎಡನೀರು ಮಠಕ್ಕೆ ಭೇಟಿ ನೀಡಿ  ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದುಕೊಂಡರು. ಪಕ್ಷದ ಪ್ರಮುಖ ಡಿ.ಕೆ. ನಾರಾಯಣನ್ ನಾಯರ್, ಜಿಲ್ಲಾ ಪಂಚಾಯತ್ ಬದಿಯಡ್ಕ ಡಿವಿಶನ್ ಅಭ್ಯರ್ಥಿ ರಾಮಪ್ಪ ಮಂಜೇಶ್ವರ, ನೀರ್ಚಾಲು ಬ್ಲೋಕ್ ಸದಸ್ಯ ಮಹೇಶ್ ವಳಕ್ಕುಂಜ, ಬದಿಯಡ್ಕ ಪಂ. ಅರ್ಥಿಗಳಾದ ಡಿ. ಶಂಕರ, ಅಶ್ವಿನಿ ಕೆ.ಎಂ., ಹರೀಶ, ಶ್ಯಾಮಪ್ರಸಾದ ಸರಳಿ, ಮಧುಸೂದನ, ಉಷಾ ಪಳ್ಳತ್ತಡ್ಕ, ರಜನಿ ಸಂದೀಪ್, ಬಿಂದ್ಯಾ ಕಾರ್ತಿಕ್ ಜೊತೆಗಿದ್ದರು.

ರೈಲ್ವೇ ದರ ಹೆಚ್ಚಳ: ಡಿವೈಎಫ್‌ಐಯಿಂದ ರೈಲು ನಿಲ್ದಾಣಕ್ಕೆ ಮಾರ್ಚ್

ಕಾಸರಗೋಡು: ರೈಲ್ವೇ ಹೆಚ್ಚಿಸಿದ  ದರವನ್ನು ಹಿಂತೆಗೆಯಬೇಕು, ಆಗಾಗ ಪ್ರಯಾಣ ದರವನ್ನು ಹೆಚ್ಚಿಸುವ ರೈಲ್ವೇಯ  ನಿಲುವು ಪ್ರತಿಭಟಿಸಿ  ಡಿವೈಎಫ್‌ಐ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾಸರಗೋಡು ರೈಲ್ವೇ ನಿಲ್ದಾಣಕ್ಕೆ ಪ್ರತಿಭಟನಾ ಮಾರ್ಚ್ ನಡೆಸಲಾಯಿತು. ಜಿಲ್ಲಾ ಕಾರ್ಯದರ್ಶಿ ರಜೀಶ್ ವೆಳ್ಳಾಡ್ ಉದ್ಘಾಟಿಸಿದರು. ಜಿಲ್ಲಾ ಜೊತೆ ಕಾರ್ಯದರ್ಶಿ ಪಿ. ಶಿವಪ್ರಸಾದ್ ಅಧ್ಯಕ್ಷತೆ ವಹಿಸಿದರು. ಜ್ಯೋತಿ ಚೆನ್ನಿಕ್ಕರೆ, ರಂಜಿನಿ ಕಾರಡ್ಕ, ಪ್ರವೀಣ್ ಪಾಡಿ, ಇಮ್ಯಾನುವೆಲ್ ಮಾತನಾಡಿದರು. ಜಿಲ್ಲಾ ಸೆಕ್ರೆಟರಿ ಯೇಟ್ ಸದಸ್ಯ ಸುಭಾಷ್ ಪಾಡಿ ಸ್ವಾಗತಿಸಿದರು. ತಾಯಲಂಗಾಡಿ ಯಿಂದ ಮೆರವಣಿಗೆ ಆರಂಭಗೊಂಡಿತು.

ಕುಂಬಳೆ ಅಗ್ರಿಕಲ್ಚರಿಸ್ಟ್ ಸಹಕಾರಿ ಸಂಘ ವಾರ್ಷಿಕ ಮಹಾಸಭೆಯಲ್ಲಿ ಭಾವಚಿತ್ರ ಅನಾವರಣ

ಕಾಸರಗೋಡು: ಕುಂಬಳೆ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಸ್ಥಾಪಕ ಅಧ್ಯಕ್ಷರಾಗಿದ್ದ ಪಿ. ಕೃಷ್ಣ ಚೆಟ್ಟಿಯಾರ್ ಅವರ ಭಾವಚಿತ್ರ ಅನಾವರಣಗೊಳಿಸಲಾಯಿತು. ಶಾಸಕ ಸಿ.ಎಚ್. ಕುಂಞಂಬು, ಅಸಿಸ್ಟೆಂಟ್ ರಿಜಿಸ್ಟ್ರಾರ್ ಜನರಲ್ ರವೀಂದ್ರ,ಸಂಘದ ಎ ಕ್ಲಾಸ್ ಸದಸ್ಯರ ಮಕ್ಕಳಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ಪಿ. ಕೃಷ್ಣ ಚೆಟ್ಟಿಯಾರ್ ಸ್ಮಾರಕ ನಗದು ಬಹುಮಾನ ಹಾಗೂ ಸ್ಮರಣಿಕೆಯನ್ನು ವಿತರಿಸಿದರು. ಸಂಘದ ಅಧ್ಯಕ್ಷ ಕೆ. ಶಿವಪ್ಪ ರೈ ಅಧ್ಯಕ್ಷತೆ ವಹಿಸಿದರು. ಸಹಕಾರಿಗಳಾದ  ಪಿ. ರಘುದೇವನ್, ಸಿ.ಎ ಸುಬೈರ್, …

ನಾಲ್ಕೂವರೆ ವರ್ಷದ ಪುತ್ರಿಯನ್ನು ಪತಿಗೆ ನೀಡಿ ಪ್ರಿಯತಮನ ಜೊತೆ ತೆರಳಿದ ಯುವತಿ

ಕಾಸರಗೋಡು: ನಾಲ್ಕೂವರೆ ವರ್ಷದ ಪುತ್ರಿ ಸಹಿತ ನಾಪತ್ತೆಯಾದ ಯುವತಿ ಪ್ರಿಯ ತಮನೊಂದಿಗೆ ನ್ಯಾಯಾಲಯಕ್ಕೆ ಹಾಜರಾಗಿದ್ದಾಳೆ. ನ್ಯಾಯಾಲಯ ಈಕೆಯ ಇಚ್ಚೆಯಂತೆ ತೆರಳಲು ತಿಳಿಸಿದ ಹಿನ್ನೆಲೆಯಲ್ಲಿ ಪುತ್ರಿಯನ್ನು ಪತಿಗೆ ನೀಡಿ ಯುವತಿ ಪ್ರಿಯತಮನ ಜೊತೆ ತೆರಳಿದ್ದಾಳೆ. ದೇಲಂಪಾಡಿ ಮಯ್ಯಳ ನಿವಾಸಿ ಎಸ್.ಎ. ಕಾವ್ಯ (24) ಪ್ರಿಯತಮನಾದ ಅಣ್ಣಪ್ಪಾಡಿಯ ನಿವಾಸಿ ಅಶ್ವತ್ಥ್ ಜೊತೆ ತೆರಳಿದ್ದಾಳೆ. ಈ ತಿಂಗಳ 22ರಂದು ಬೆಳಿಗ್ಗೆ ಕಾವ್ಯ ಪುತ್ರಿಯ ಜೊತೆ ಮನೆಯಿಂದ ತೆರಳಿದ್ದಳು. ಮರಳಿ ಬಾರದ ಹಿನ್ನೆಲೆಯಲ್ಲಿ ಪತಿ ಆದೂರು ಪೊಲೀಸರಿಗೆ ದೂರು ನೀಡಿದ್ದಾರೆ. ಕಾವ್ಯ ಪ್ರಿಯತಮ …

ಯಶಸ್ವಿಯಾಗಿ ನಭಕ್ಕೆ ಚಿಮ್ಮಿದ ಎಲ್‌ವಿಎಂ3 –ಎಂ36 ಉಪಗ್ರಹ

ಶ್ರೀಹರಿಕೋಟಾ: ಅಮೆರಿಕಾದ ಬ್ಲೂ ಬರ್ಡ್ ಬ್ಲಾಕ್-2 ಉಪಗ್ರಹವನ್ನು ಹೊತ್ತ ಇಸ್ರೋದ ಎಲ್‌ವಿಎಂ 3-ಎಂ36 ರಾಕೆಟ್ ಯಶಸ್ವಿಯಾಗಿ ಉಡ್ಡಯನ ಮಾಡಲಾಯಿತು. ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ  ನೆಲೆಯಿಂದ ಇಂದು ಬೆಳಿಗ್ಗೆ ೮.೫೪ಕ್ಕೆ ಯಶಸ್ವಿಯಾಗಿ  ಇದರ ಉಡಾವಣೆ ಯಾಗಿದೆ.  ಸಂವಹನ ಉಪಗ್ರಹ 6100 ಕಿಲೋ ತೂಕವಿದೆ. ಇದು ಯಶಸ್ವಿಯಾಗಿ ಕಕ್ಷೆ ಸೇರಿದ ಬಳಿಕ ಉಪಗ್ರಹದಿಂದ ನೇರವಾಗಿ ಪ್ರಪಂಚದಿಂದ ಯಾವುದೇ ಸ್ಥಳಕ್ಕೆ ಮೊಬೈಲ್‌ಗೆ  ಸಂಪರ್ಕ ಕಲ್ಪಿಸುವ ಸಂಸ್ಥೆಯಾಗಿ ಹೊರಹೊಮ್ಮಲಿದೆ. ಬ್ಲೂ ಬರ್ಡ್ ಉಪಗ್ರಹಗಳು ವಿಶೇಷ ಹಾರ್ಡ್ ವೇರ್ ಅಥವಾ ಫೋನ್ ಮಾರ್ಪಾಡುಗಳಿಲ್ಲದೆ ನೇರವಾಗಿ …

ಮನೆಯಿಂದ 2.50 ಲಕ್ಷ ರೂ.ನ ಚಿನ್ನದೊಡವೆ ಕಳವು

ಕಾಸರಗೋಡು: ಮನೆಯಿಂದ 2.50 ಲಕ್ಷ ರೂ. ಮೌಲ್ಯದ ಚಿನ್ನದೊಡವೆ ಕಳವುಗೈದ ಬಗ್ಗೆ ಕಾಸರಗೋಡು ಪೊಲೀಸರಿಗೆ ದೂರು ನೀಡಲಾಗಿದೆ. ನಗರದ ನೆಲ್ಲಿಕುಂಜೆ ಬಂಗರಗುಡ್ಡೆ ನಿವಾಸಿ ಬದರ್ ಬಿಲಾಲ್ ಸಿ.ಎಂ (37) ಎಂಬವರು ಈ ಬಗ್ಗೆ ದೂರು ನೀಡಿದ್ದು, ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ತನಿಖೆ ಆರಂಭಿಸಿದ್ದಾರೆ. ಡಿಸೆಂಬರ್ 23ರಂದು ಬಂಗರ ಗುಡ್ಡೆಯಲ್ಲಿ ತಾನು ವಾಸಿಸುತ್ತಿರುವ  ಬಾಡಿಗೆ ಮನೆಯೊಳಗಿನ ಕಪಾಟಿನ ಲ್ಲಿರಿಸಿದ್ದ 2.50 ಲಕ್ಷ ರೂ. ಮೌಲ್ಯದ  ಎರಡೂವರೆ ಪವನ್‌ನ ಚಿನ್ನದೊ ಡವೆಯನ್ನು ಕಳವುಗೈದಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ …

ಹೊಯ್ಗೆ ಸಾಗಿಸುತ್ತಿದ್ದ ಆಟೋ ರಿಕ್ಷಾ ವಶ

ಉಪ್ಪಳ: ಆಟೋ ರಿಕ್ಷಾದಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ ಹೊಯ್ಗೆಯನ್ನು ಮಂಜೇಶ್ವರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಿನ್ನೆ ಬೆಳಿಗ್ಗೆ ಹೊಸಂಗಡಿ ಭಾಗದಲ್ಲಿ ಎಸ್.ಐ ವೈಷ್ಣವ್ ರಾಮಚಂದ್ರನ್ ನೇತೃತ್ವದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಹೊಯ್ಗೆ ತುಂಬಿಸಿದ ಆಟೋ ರಿಕ್ಷಾ ತಲುಪಿದೆ.  ಯಾವುದೋ ಹೊಳೆಯಿಂದ ಸಂಗ್ರಹಿಸಿದ ಹೊಯ್ಗೆಯನ್ನು ೧೦ ಗೋಣಿಚೀಲಗಳಲ್ಲಿ ತುಂಬಿಸಿ ರಿಕ್ಷಾದಲ್ಲಿ ಸಾಗಿಸಲಾಗುತ್ತಿತ್ತು. ಈ ಸಂಬಂಧ ರಿಕ್ಷಾವನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಚಾಲಕ ಮಂಜೇಶ್ವರ ಕಡಪ್ಪುರ ಜಾರ ನಿವಾಸಿ ಆಶಿಫ್ (36) ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.

ಸ್ಕೂಟರ್ ತಡೆದು ನಿಲ್ಲಿಸಿ ಸಿಪಿಎಂ ಕಾರ್ಯಕರ್ತರಿಗೆ ಆಕ್ರಮಣ : 10 ಮುಸ್ಲಿಂ ಲೀಗ್ ಕಾರ್ಯಕರ್ತರ ವಿರುದ್ಧ ಕೇಸು

ಕಾಸರಗೋಡು: ಪನೆಯಾಲ್,  ಪೆರಿಯಾಟಡ್ಕದಲ್ಲಿ ಸ್ಕೂಟರನ್ನು ತಡೆದು ನಿಲ್ಲಿಸಿ ಸಿಪಿಎಂ ಕಾರ್ಯಕರ್ತರಿಗೆ ಆಕ್ರಮಿಸಿರುವುದಾಗಿ ದೂರಲಾಗಿದೆ. ಪನೆಯಾಲ್  ತೋಕನಮೊಟ್ಟ ನಿವಾಸಿ ಎನ್.ಕೆ. ದಿಲೀಶ್ (24), ಲಿಜೇಶ್ ಎಂಬಿವರು ಗಾಯಗೊಂಡಿದ್ದಾರೆ. ಇದರಲ್ಲಿ ದಿಲೀಶ್‌ನನ್ನು ಕಾಞಂಗಾಡ್ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ರಾತ್ರಿ 10.30 ರ ವೇಳೆ ಘಟನೆ ನಡೆದಿದೆ. ಲಿಜೇಶ್‌ನ ಜೊತೆ ದಿಲೀಶ್ ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದಾಗ ಪೆರಿಯಾಟಡ್ಕಕ್ಕೆ ತಲುಪಿದ ವೇಳೆ ಮುಸ್ಲಿಂ ಲೀಗ್ ಕಾರ್ಯಕರ್ತರ ತಂಡವೊಂದು ತಡೆದು ನಿಲ್ಲಿಸಿ ದೊಣ್ಣೆ, ಪಂಚ್‌ನಿಂದ  ಆಕ್ರಮಿಸಿರುವುದಾಗಿ ಸಿಪಿಎಂ ಕಾರ್ಯಕರ್ತರು ದೂರಿದ್ದಾರೆ. ಪಂಚ್‌ನಿಂದ ಗುದ್ದಿದ ಹಿನ್ನೆಲೆಯಲ್ಲಿ …