ಕುಂಬಳೆಯಲ್ಲಿ ಬಹುಮತ ಗಳಿಸಿದ ಮುಸ್ಲಿಂ ಲೀಗ್: ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯನ್ನು ಆಯ್ಕೆ ಮಾಡುವಲ್ಲಿ ಗೊಂದಲ ಸೃಷ್ಟಿ

ಕುಂಬಳೆ:  ಪಂಚಾಯತ್ ಚುನಾ ವಣೆಯಲ್ಲಿ ಕುಂಬಳೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ  ಮುಸ್ಲಿಂ ಲೀಗ್ ಪಂಚಾಯತ್ ಅಧ್ಯಕ್ಷರಾಗಿ ಯಾರನ್ನು ಆರಿಸಬೇಕೆಂಬ ವಿಷಯ ಗೊಂದಲಕ್ಕೀ ಡಾಗಿದೆ. ಮುಸ್ಲಿಂ ಲೀಗ್ ಮಂಜೇಶ್ವರ ಮಂಡಲ ಪ್ರಧಾನ ಕಾರ್ಯದರ್ಶಿಯೂ, ಎರಡುಬಾರಿ ಪಂಚಾಯತ್ ಸದಸ್ಯ, ಒಂದು ಬಾರಿ ಬ್ಲೋಕ್ ಪಂಚಾಯತ್ ಸದಸ್ಯನಾಗಿದ್ದ ಎ.ಕೆ. ಆರಿಫ್ ಈ ಬಾರಿಯೂ ಪಂಚಾಯತ್ ಸದಸ್ಯನಾಗಿ ಆಯ್ಕೆಯಾಗಿದ್ದಾರೆ. ಮುಸ್ಲಿಂ ಲೀಗ್ ರಾಜ್ಯ ಕೌನ್ಸಿಲರ್, ಜಿಲ್ಲಾ ಸಮಿತಿ ಸದಸ್ಯ ಎಂಬೀ ನೆಲೆಗಳಲ್ಲಿ ಕಾರ್ಯಾಚರಿಸುವ ವಿ.ಪಿ. ಅಬ್ದುಲ್ ಖಾದರ್ ಹಾಜಿ  ಎರಡು ಬಾರಿ ಪಂಚಾಯತ್ …

ಹಿರಿಯ ಕೃಷಿಕ ನಿಧನ

ಮಂಜೇಶ್ವರ: ಬೆಜ್ಜ ಕೊಳಂಜ ನಿವಾಸಿ ಅರಿಯಾಳ ಮಲರಾಯ ಬಂಟ ತರವಾಡಿನ ಗುರಿಕಾರ ಹಿರಿಯ ಕೃಷಿಕ ಬಂಟಪ್ಪ ಪೂಜಾರಿ (70) ನಿಧನ ಹೊಂ ದಿದರು. ನಿನ್ನೆ ಮುಂಜಾನೆ ಹೃದಯಾ ಘಾತ ಉಂಟಾಗಿದ್ದು, ಉಪ್ಪಳದ ಖಾಸಗಿ ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧನ ಸಂಭವಿಸಿದೆ. ಮೃತರು ಪತ್ನಿ ಮೀನಾಕ್ಷಿ, ಮಕ್ಕಳಾದ ಚರಣ್‌ರಾಜ್, ಶರತ್, ಹರ್ಷಿತ, ಭರತ್, ಅಳಿಯ ವಿನಯ ಕುಮಾರ್, ಸೊಸೆಯಂದಿರಾದ ಜಯಶ್ರೀ, ಸುಪ್ರೀತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಜಿಲ್ಲಾ ಪಂಚಾಯತ್: ತುಳು, ಕನ್ನಡ, ಮಲಯಾಳ, ಇಂಗ್ಲೀಷ್ ಭಾಷೆಗಳಲ್ಲಿ ಪ್ರಮಾಣವಚನ ಸ್ವೀಕರಿಸಿದ ಸದಸ್ಯರು

ಕಾಸರಗೋಡು: ಸಪ್ತಭಾಷಾ ಸಂಗಮ ಭೂಮಿಯಾದ ಕಾಸರಗೋಡಿನಲ್ಲಿ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಗೆದ್ದ ಸದಸ್ಯರು ಕಲೆಕ್ಟ್ರೇಟ್‌ನ ಕಾನ್ಫರೆನ್ಸ್ ಹಾಲ್‌ನಲ್ಲಿ ನಿನ್ನೆ ನಡೆದ ಕಾರ್ಯಕ್ರಮ ಭಾಷಾ ವೈವಿಧ್ಯಮಯ ಕಂಪು ಮೆರೆಯಿತು. ಜಿಲ್ಲಾ ಪಂಚಾಯತ್‌ಗೆ ಆರಿಸಲ್ಪಟ್ಟ ಸದಸ್ಯರು ತಮ್ಮ ಮಾತೃಭಾಷೆಯಲ್ಲೇ ಪ್ರಮಾಣವಚನ  ಸ್ವೀಕರಿಸಿದರೆ, ಕೆಲವರು ಇಂಗ್ಲಿಷ್‌ನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಕೆಲವರು ಕನ್ನಡ, ತುಳು, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಕಾಸರಗೋಡಿನ ಸಪ್ತಭಾಷಾ ಸಂಗಮ ಭೂಮಿಯ ವೈವಿದ್ಯತೆಯನ್ನು ಸಾರಿದರು. ಜಿಲ್ಲಾ ಪಂಚಾಯತ್‌ನ ಬದಿಯಡ್ಕ ಡಿವಿಷನ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದ …

ಕಾರಡ್ಕ ಫೌಂಡೇಶನ್ ಟ್ರಸ್ಟ್‌ನ ಕಾರಡ್ಕ ಸಂಭ್ರಮ: ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇಧದಲ್ಲಿ ಸೇರ್ಪಡೆಗೆ ಯತ್ನಿಸುವೆ- ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್

ಮುಳ್ಳೇರಿಯ: ತುಳು ಭಾಷಿಗರ ಹಲವು ಕಾಲದ ಬೇಡಿಕೆಯಾದ ಸಂವಿಧಾನದ ೮ನೇ ಪರಿಚ್ಛೇಧದ ಸೇರ್ಪಡೆಗೆ ಪಾರ್ಲಿಮೆಂಟ್‌ನಲ್ಲಿ ಪ್ರಸ್ತಾಪ ನಡೆಸಿದ್ದು, ಮುಂದೆಯೂ ಅದಕ್ಕಾಗಿ ತೀವ್ರ ಯತ್ನ ನಡೆಸುವೆನೆಂದು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ನುಡಿದರು. ಅವರು ಮುಂಡೋಳು ಕ್ಷೇತ್ರದ ಸಭಾ ಭವನದಲ್ಲಿ ನಡೆದ ಕಾರಡ್ಕ ಫೌಂಡೇಶನ್ ಟ್ರಸ್ಟ್‌ನ ಕಾರಡ್ಕ ಸಂಭ್ರಮ, ಸಾಧಕರಿಗೆ ಪ್ರಶಸ್ತಿ ಪ್ರಧಾನ, ಶಿಷ್ಯರ ರಂಗಪ್ರವೇಶ, ಗುರುವಂದನಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಪುರಾಣ ಕತೆಗಳ ಮೂಲಕ ಭಕ್ತಿ ಪ್ರಧಾನ ಸಂಸ್ಕೃತಿ ಬೆಳೆಸುವ ಯಕ್ಷಗಾನ ಕಲೆಯನ್ನು ತಲೆಮಾರುಗಳಿಗೆ ಹಸ್ತಾಂತರಿಸಲು ಕಾರಡ್ಕ …

ವಿಸ್ಮಯ ಪಾರ್ಕ್‌ನಲ್ಲಿ ಇಟಾಲಿಯನ್ ರೈಡ್ ಸಿದ್ಧ

ಕಣ್ಣೂರು: ಪರಶ್ಶಿನಿಕಡವಿನ ವಿಸ್ಮಯ ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ಹೊಸ ಇಟಾಲಿಯನ್ ರೈಡ್ ರೋಡಿಕ್ಸ್ ಸಿದ್ಧಗೊಂಡಿದೆ. ೧೫ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಪೂರ್ತಿಗೊಳಿಸಲಾಗಿದೆ. ಅಡ್ವೆಂಚರ್ ರೈಡ್ ರೋಡಿಕ್ಸ್ ಇದನ್ನು ಸ್ಪೀಕರ್ ಎ.ಎನ್. ಶಂಸೀರ್ ನಾಳೆ ಬೆಳಿಗ್ಗೆ ಉದ್ಘಾಟಿಸುವರು. ಒಂದು ಬಾರಿ 24 ಮಂದಿಗೆ ರೈಡ್ ನಡೆಸಬಹುದಾದ 22 ಮೀಟರ್ ಎತ್ತರದಲ್ಲಿ ತಿರುಗುವ ಇದು 360 ಡಿಗ್ರಿಯಲ್ಲಿ ತಿರುಗುತ್ತದೆ. ಸಾಹಸಿಕತೆಯನ್ನು ಇಷ್ಟಪಡುವ ಯುವಕರು ಹಾಗೂ ಕುಟುಂಬ ಇದರಲ್ಲಿ ಭಾಗವಹಿಸಬಹುದೆಂದು ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇಮ್ಮಡಿ ಸೇಫ್ಟಿ ಸಿಸ್ಟಂ ರೈಡ್‌ನಲ್ಲಿ ಒಳಪಡಿಸಲಾಗಿದೆ …

ಬಿದ್ದು ಸಿಕ್ಕಿದ ಚಿನ್ನ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಬಟ್ಟು ಮೂಲ್ಯ

ಬಾಯಾರು: ದಾರಿಯಲ್ಲಿ ಬಿದ್ದು ಸಿಕ್ಕಿದ ೨ ಪವನ್‌ನ ಚಿನ್ನದ ಕಾಲ್ಗೆಜ್ಜೆಯನ್ನು ವಾರಸುದಾರಳಿಗೆ ಹಿಂತಿರುಗಿಸಿ ಕೂವೆತ್ತೋಡಿ ನಿವಾಸಿ ಬಟ್ಟು ಮೂಲ್ಯ ಪ್ರಾಮಾಣಿಕತೆ ಮೆರೆದಿದ್ದಾರೆ. ಇವರು ನಡೆದು ಹೋಗುತ್ತಿದ್ದಾಗ ದಾರಿಯಲ್ಲಿ ಬಿದ್ದು ಸಿಕ್ಕಿದ ಚಿನ್ನವನ್ನು ಅದರ ವಾರಿಸು ದಾರರನ್ನು ಪತ್ತೆಹಚ್ಚಿ ಹಿಂತಿರುಗಿಸಿದ ಇವರ ಪ್ರಾಮಾಣಿಕತೆಗೆ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಕನಿಯಾಲ ಪಳ್ಳಿತ್ತಡ್ಕ ನಿವಾಸಿಯಾದ ಮಹಿಳೆಯೋರ್ವರ ಆಭರಣ ಇದಾಗಿತ್ತೆಂದು ಅವರು ತಿಳಿಸಿದ್ದಾರೆ.

ಮಹಿಳೆಯರಿಗೆ ತಿಂಗಳಿಗೆ 1000 ರೂ. ನೀಡುವ ಸ್ತ್ರೀ ಸುರಕ್ಷಾ ಯೋಜನೆ: ಇಂದಿನಿಂದ ಅರ್ಜಿ ಸ್ವೀಕಾರ

ತಿರುವನಂತಪುರ: ರಾಜ್ಯದ ಮಹಿಳೆಯರ ಕ್ಷೇಮ ಖಚಿತಪಡಿಸಲು ರಾಜ್ಯ ಸರಕಾರ ಘೋಷಿಸಿದ ಸ್ತ್ರೀ ಸುರಕ್ಷಾ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ. ಇಂದಿನಿಂದ ಸ್ಥಳೀಯಾಡಳಿತ ಸಂಸ್ಥೆ ಇಲಾಖೆಗಳಲ್ಲಿ ಅರ್ಜಿ ಸ್ವೀಕರಿಸಲಾಗುತ್ತಿದೆ. ksmart.lsgkerala.gov.in ಎಂಬ ವೆಬ್‌ಸೈಟ್ ಮೂಲಕ ಸ್ಥಳೀಯಾಡಳಿತ ಸಂಸ್ಥೆಗಳ ಕಾರ್ಯದರ್ಶಿಗೆ ಅರ್ಜಿ ಸಲ್ಲಿಸಬೇಕಾಗಿದೆ. ಪ್ರಸ್ತುತ ರಾಜ್ಯದ ಯಾವುದೇ ಇತರ ಪಿಂಚಣಿಗಳನ್ನು ಪಡೆಯದ ಮಹಿಳೆಯರು ತಿಂಗಳಿಗೆ 1000 ರೂ.ನಂತೆ ಧನಸಹಾಯ ಅರ್ಹರಾಗಿದ್ದಾರೆ ಎಂದು ಸ್ಥಳೀಯಾಡಳಿತ ಇಲಾಖೆ ಪ್ರಿನ್ಸಿಪಲ್ ಡೈರೆಕ್ಟರ್ ತಿಳಿಸಿದ್ದಾರೆ. ಕೇರಳದಲ್ಲಿ ಖಾಯಂ ವಾಸವಾಗಿರುವ ೩೫ರಿಂದ 60ರ ಮಧ್ಯೆ ಪ್ರಾಯದ ಮಹಿಳೆಯರು, ಟ್ರಾನ್ಸ್ …

10ನೇ ತರಗತಿ ವಿದ್ಯಾರ್ಥಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ: ಐದು ದಿನಗಳಲ್ಲಿ ನೇಣಿಗೆ ಶರಣಾಗಿದ್ದು ಮೂವರು ವಿದ್ಯಾರ್ಥಿಗಳು

ಕಾಸರಗೋಡು: ಹತ್ತನೇ ತರಗತಿಯ ವಿದ್ಯಾರ್ಥಿ ಮನೆಯೊಳಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ರಾವಣೇಶ್ವರ ಕುನ್ನುಪ್ಪಾರೆ ಕರಿಪ್ಪಾಡಕ್ಕನ್ ವೀಟಿಲ್ ರಾಧಾಕೃಷ್ಣನ್-ರಜಿತಾ ದಂಪತಿ ಪುತ್ರ, ಹೊಸದುರ್ಗ ಕೇಂದ್ರೀಯ ವಿದ್ಯಾಲಯದ ೧೦ನೇ ತರಗತಿ ವಿದ್ಯಾರ್ಥಿಯಾದ  ಪಿ. ರಮಿತ್ (15) ಸಾವನ್ನಪ್ಪಿದ ಬಾಲಕ. ನಿನ್ನೆ ಸಂಜೆ ಮನೆಯಲ್ಲಿ ರಮಿತ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಅದನ್ನು ಕಂಡ ಮನೆಯವರು ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಕಲಿಕೆಯಲ್ಲಿ ಮುಂದಿದ್ದ ಈತ ಚೆಸ್ ತಾರೆಯೂ ಆಗಿದ್ದನು. ಮೃತನು ಹೆತ್ತವರ …

ಮಲೆಯಾಳಂ  ಸಿನಿಮಾಕ್ಕೆ ಹೊಸ ಆಯಾಮ ನೀಡಿದ್ದ ನಟ ಶ್ರೀನಿವಾಸನ್ ನಿಧನ

ಕೊಚ್ಚಿ: ಮಲೆಯಾಳಂ ಸಿನಿಮಾರಂಗದ ಖ್ಯಾತ ನಟ, ನಿರ್ದೇಶಕ ಹಾಗೂ ಚಿತ್ರರಚನೆ ಗಾರನಾಗಿದ್ದ ಶ್ರೀನಿವಾಸನ್ (69) ನಿಧನ ಹೊಂದಿದರು. ದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಉದಯಂ ಪೇರೂರಿನಲ್ಲಿರುವ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ನಿನ್ನೆ ಅವರ ಆರೋಗ್ಯ ಸ್ಥಿತಿ ಹದಗೆಡತೊಡಗಿದಾಗ ಅವರನ್ನು ತ್ರಿಪುಣ್ಣಿತ್ತರ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತಾದರೂ ಫಲ ಕಾರಿಯಾಗದೆ ಇಂದು ಬೆಳಿಗ್ಗೆ ನಿಧನಹೊಂದಿದರು. 1956 ಎಪ್ರಿಲ್ 4ರಂದು ಕೂತುಪರಂಬ ಪಾಟ್ಯದಲ್ಲಿ ಜನಿಸಿದ ಶ್ರೀನಿವಾಸನ್ ಶಾಲಾ ಶಿಕ್ಷಣದ ಬಳಿಕ ಮದ್ರಾಸ್ ಇನ್‌ಸ್ಟಿಟ್ಯೂಟ್ ಗೆ  ಸೇರಿದರು. ಸೂಪರ್ ಸ್ಟಾರ್ …

ಅಯ್ಯಪ್ಪನ ಚಿನ್ನ ಎಗರಿಸಿದ ಪ್ರಕರಣ: ಚಿನ್ನದ ವ್ಯಾಪಾರಿ ಸೇರಿ ಮತ್ತೆ ಇಬ್ಬರ ಸೆರೆ: 480 ಗ್ರಾಂ ಚಿನ್ನ ವಶ

ತಿರುವನಂತಪುರ: ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿ ಚಿನ್ನವನ್ನು ಕರಗಿಸಿ ತೆಗೆದ ಹಾಗೂ ಬಳಿಕ ಅದನ್ನು ಪಡೆದ ಇಬ್ಬರನ್ನು ವಿಶೇಷ ತನಿಖಾ ತಂಡ ಬಂಧಿಸಿದೆ. ಶಬರಿಮಲೆ ದೇಗುಲದ ದ್ವಾರಪಾಲಕ ಮೂರ್ತಿಗಳ ಚಿನ್ನದ  ಕವಚಗಳ ಚಿನ್ನವನ್ನು ಕರಗಿಸಿ ಬೇರ್ಪಡಿಸಿದ ಚೆನ್ನೈಯ ಸ್ಮಾರ್ಟ್ ಕ್ರಿಯೇಶನ್ಸ್ ಸಂಸ್ಥೆಯ ಸಿಇಒ ಪಂಕಜ್ ಭಂಡಾರಿ ಹಾಗೂ  ಆ ಚಿನ್ನವನ್ನು ಬಳಿಕ ಪಡೆದ ಕರ್ನಾಟಕ ಬಳ್ಳಾರಿಯ ರೊದ್ದಂ ಜ್ಯುವೆಲ್ಲರಿ ಮಾಲಕ ಗೋವರ್ಧನ್ ಬಂಧಿತರಾದ ಆರೋಪಿಗಳು.  ಆರೋಪಿಗಳ ಪೈಕಿ ಗೋವರ್ಧನ್‌ನ ಚಿನ್ನದಂಗಡಿಯಿಂದ ತನಿಖಾ ತಂಡ 480 …