ಕೌತುಕ ತಂದ ತ್ರಿವಳಿ ಸಹೋದರಿಯರ ಮತದಾನ

ಮುಳಿಯಾರು: ಪಂಚಾಯತ್‌ನ  ಇರಿಯಣ್ಣಿ ಜಿವಿಎಚ್‌ಎಸ್‌ಎಸ್ ಬೂತ್‌ಗೆ ತಲುಪಿದ ಮೂವರು ಯುವತಿಯರನ್ನು ಕಂಡು ಮತದಾರರು ಹಾಗೂ ಅಧಿಕಾರಿಗಳಿಗೆ ಕೌತುಕ ಮೂಡಿತು. ತ್ರಿವಳಿ ಸಹೋದರಿಯರಾದ ಇವರು ಜೊತೆಯಾಗಿ ಬಂದು ಮತದಾನಕ್ಕಾಗಿ ಸರದಿ ಸಾಲಿನಲ್ಲಿ ನಿಂತಿದ್ದರು. ಇರಿಯಣ್ಣಿ ಬೇಪು ನಿವಾಸಿ ಗಂಗಾಧರನ್- ರೋಹಿಣಿ ದಂಪತಿಯ ಪುತ್ರಿಯರಾಗಿದ್ದಾರೆ. ರಂಜಿಶ, ರಂಜಿಮ, ರಂಜಿತ ಎಂಬ ಹೆಸರಿನ ಈ ಮೂವರು ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದರೂ, ಮತದಾನ ಮಾಡಲು ಏಕ ಸಮಯದಲ್ಲಿ ಬೂತ್‌ಗೆ ತಲುಪಿರುವುದು ನೋಡುಗರಿಗೆ ಆಶ್ಚರ್ಯ ಸೃಷ್ಟಿಸಿತು.

ನೀರ್ಚಾಲು ಕುಮಾರಸ್ವಾಮಿ ಭಜನಾ ಮಂದಿರ ವಾರ್ಷಿಕೋತ್ಸವ

ಬದಿಯಡ್ಕ: ನೀರ್ಚಾಲು ಕುಮಾರಸ್ವಾಮಿ ಭಜನಾ ಮಂದಿರದ 51ನೇ ವಾರ್ಷಿಕೋತ್ಸವ ನಿನ್ನೆ ವಿವಿಧ ಕಾರ್ಯಕ್ರಮ ಗಳೊಂದಿಗೆ ಜರಗಿತು. ಬೆಳಿಗ್ಗೆ 6.30ಕ್ಕೆ ಧ್ವಜಾರೋಹಣ, ಗಣಪತಿ ಹವನ, ಜರಗಿತು. ಮಂದಿರದ ಅಧ್ಯಕ್ಷ ನಾರಾಯಣ ಶೆಟ್ಟಿ, ಕಾರ್ಯದರ್ಶಿ ಬಾಲಕೃಷ್ಣ ನಾಯ್ಕ್ ನೇತೃತ್ವ ವಹಿಸಿದರು. ವಿವಿಧ ತಂಡಗಳಿಂದ ಭಜನೆ, ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ, ಅಪರಾಹ್ನ 2ರಿಂದ ಭಜನೆ, ದೀಪ ಪ್ರತಿಷ್ಠೆ, ರಾತ್ರಿ ಮಹಾಪೂಜೆ ಜರಗಿತು.

ಕಂದಾಯ ಜಿಲ್ಲಾ ಶಾಲಾ ಕಲೋತ್ಸವ ಯಶಸ್ವಿಗೆ ಮೊಗ್ರಾಲ್ ಶಾಲೆಯ ಪೂರ್ವ ವಿದ್ಯಾರ್ಥಿಗಳು ರಂಗಕ್ಕೆ

ಕಾಸರಗೋಡು: ಮೊಗ್ರಾಲ್‌ಗೆ ಇದೇ ಪ್ರಥಮವಾಗಿ ತಲುಪಿದ ಕಂದಾಯ ಜಿಲ್ಲಾ ಶಾಲಾ ಕಲೋತ್ಸವ ವನ್ನು ಇತಿಹಾಸ ಪೂರ್ಣಗೊಳಿಸಲು ಪೂರ್ವ ವಿದ್ಯಾರ್ಥಿಗಳು ರಂಗಕ್ಕಿಳಿದಿ ದ್ದಾರೆ. ಹಲವಾರು ಕವಿಗಳಿಗೆ, ಕಲಾ ಪ್ರತಿಭೆಗಳಿಗೆ ಮೊಗ್ರಾಲ್ ಜನ್ಮ ನೀಡಿದ್ದು, ಇಶಲ್ ಗ್ರಾಮ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಈ ತಿಂಗಳ 29, 30, 31ರಂದು ಕಂದಾಯ ಜಿಲ್ಲಾ ಶಾಲಾ ಕಲೋತ್ಸವದ ವೇದಿಕೆ ಸ್ಪರ್ಧೆಗಳು ಮೊಗ್ರಾಲ್ ಜಿವಿಎಚ್‌ಎಸ್‌ಎಸ್‌ನಲ್ಲಿ ನಡೆಯಲಿದೆ. ಇದರ ಯಶಸ್ವಿಗಾಗಿ 1989-90 ರ ಎಸ್‌ಎಸ್‌ಎಲ್‌ಸಿ ಬ್ಯಾಚ್ ಮೊದಲ ಹಂತದ ಸಹಾಯವಾಗಿ 55,555 ರೂ.ಗಳ ಚೆಕ್‌ನ್ನು ಪ್ರಧಾನ …

ಜಿಲ್ಲಾ ಕುಲಾಲ ಸಂಘದಿಂದ ಸಹಾಯಧನ ಹಸ್ತಾಂತರ

ಮಂಜೇಶ್ವರ: ಜಿಲ್ಲಾ ಕುಲಾಲ ಸಂಘ ಮಂಜೇಶ್ವರ ಇದರ ಆಶ್ರಯದಲ್ಲಿ ಕುಲಾಲ ಬಂಧುಗಳ ಸಹಕಾರದಿಂದ ರೂಪುಗೊಂಡ ಕುಲಾಲ ಸಮಾಜದ ‘ನೊಂದ ಜೀವಕ್ಕೊಂದು ಆಸರೆ’ ಕಾರ್ಯಕ್ರಮದಂತೆ ಅಶಕ್ತ ಕುಟುಂಬ ಸದಸ್ಯರ ಚಿಕಿತ್ಸೆಗಾಗಿ ಸಹಾಯಧನದ ಮೊತ್ತವನ್ನು ಹಸ್ತಾಂತರಿಸಲಾಯಿತು. ಕುಲಾಲ ಸಂಘ ಮೀಂಜ ಶಾಖೆಗೊಳ ಪಟ್ಟ ಕೋಳ್ಯೂರು ಚಕ್ರಕೋಡಿ ನಿವಾಸಿ ಶ್ರೀನಾಥ್‌ರಿಗೆ ತೂಮಿನಾಡು ಕುಲಾಲ ಸಮುದಾಯ ಭವನದಲ್ಲಿ ಜರಗಿದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಈ ಮೊತ್ತವನ್ನು ಹಸ್ತಾಂತರಿಸಲಾಯಿತು. ಗಣ್ಯರು ಉಪಸ್ಥಿತರಿದ್ದರು.

ಪತ್ನಿ ಸಹಿತ 4 ಮಂದಿಯನ್ನು ಕೊಲೆಗೈದ ಆರೋಪಿಗೆ ವಿರಾಜಪೇಟೆ ನ್ಯಾಯಾಲಯ ಗಲ್ಲು ಶಿಕ್ಷೆ ಘೋಷಣೆ

ಮಡಿಕೇರಿ: ಅಕ್ರಮ ಸಂಬಂಧ ಶಂಕಿಸಿ ದ್ವೇಷದಿಂದ ಪತ್ನಿ, ಮಗಳು, ಅಜ್ಜ, ಅಜ್ಜಿಯನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ವಿರಾಜಪೇಟೆ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ಮರಣದಂಡನೆ ಶಿಕ್ಷೆ ಘೋಷಿಸಿದೆ. ಕೇರಳದ ವಯನಾಡು ಜಿಲ್ಲೆ ತಿರುನಲ್ಲಿ ಅಪ್ಪಪ್ಪಾರೆ ನಿವಾಸಿ ಗಿರೀಶ್ (38) ಗಲ್ಲುಶಿಕ್ಷೆಗೊಳಗಾದ ಆರೋಪಿ. ಜೇನು ಕುರುಬರ ಕರಿಯ (75), ಇವರ ಪತ್ನಿ ಗೌರಿ (70), ಗಿರೀಶ್‌ನ ಪತ್ನಿ ನಾಗಿ (), ಮಲಮಗಳು ಕಾವೇರಿ (6), ಈ ನಾಲ್ವರನ್ನು ಆರೋಪಿ ಗಿರೀಶ್ ಕಡಿದು ಕೊಲೆಗೈಯ್ಯಲಾಗಿದೆ. ಪೊನ್ನಂಪೇಟೆ ತಾಲೂಕು ಬೇಗೂರು …

ಕುಂಬ್ಡಾಜೆಯಲ್ಲಿ ಅಭ್ಯರ್ಥಿಯ ಮನೆ ಸಮೀಪ ನಾಡಬಾಂಬ್ ಸ್ಫೋಟ: ಸಾಕು ನಾಯಿ ಸಾವು; ಮೂರು ಬಾಂಬ್‌ಗಳು ಪತ್ತೆ

ಬದಿಯಡ್ಕ: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಬ್ಡಾ ಜೆಯಲ್ಲಿ ಅಭ್ಯರ್ಥಿಯ ಮನೆಯ ಮುಂದೆ  ನಡೆದ  ನಾಡಬಾಂಬ್ ಸ್ಫೋಟದಲ್ಲಿ ಸಾಕುನಾಯಿ ಸಾವಿಗೀಡಾದ ಘಟನೆ ನಡೆದಿದೆ.  ವಿಷಯ ತಿಳಿದು ತಲುಪಿದ ಬದಿಯಡ್ಕ ಪೊಲೀಸರು ಸ್ಫೋಟಗೊಳ್ಳದೆ ಉಳಿದ ಮೂರು ನಾಡಬಾಂಬ್‌ಗಳನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಜಿಲ್ಲಾ ಪಂಚಾ ಯತ್ ಬದಿಯಡ್ಕ ಡಿವಿಶನ್‌ನ ಎಡರಂಗ ಅಭ್ಯರ್ಥಿಯಾದ ಕಾಡ್ರಬೆಳ್ಳಿಗೆಯ ಪ್ರಕಾಶರ ಮನೆ ಸಮೀಪದ ತೋಟದಲ್ಲಿ ಇಂದು ಬೆಳಿಗ್ಗೆ 7 ಗಂಟೆ ವೇಳೆ ಭಾರೀ ಶಬ್ದದೊಂದಿಗೆ ಸ್ಫೋಟ ನಡೆದಿದೆ.  ಶಬ್ದ ಕೇಳಿ ಜನರು ಅಲ್ಲಿಗೆ ತಲುಪಿದಾಗ ಪ್ರಕಾಶರ …

ಕಾಸರಗೋಡು ಸಹಿತ ಏಳು ಜಿಲ್ಲೆಗಳಲ್ಲಿ ಬಿರುಸಿನ ಮತದಾನ

ಕಾಸರಗೋಡು: ಕಾಸರಗೋಡು ಸೇರಿದಂತೆ ಏಳು ಜಿಲ್ಲೆಗಳ ಸ್ಥಳೀಯಾ ಡಳಿತ ಸಂಸ್ಥೆಗಳ ಚುನಾವಣೆ  ಇಂದು ಬೆಳಿಗ್ಗೆ  ಆರಂಭಗೊಂಡಿದೆ. ಹೆಚ್ಚಿನ ಎಲ್ಲೆಡೆಗಳಲ್ಲಿ ಇಂದು ಬೆಳಿಗ್ಗಿನಿಂದಲೇ ಬಿರುಸಿನ ಮತದಾನ ನಡೆಯುತ್ತಿದೆ. ಕಾಸರಗೋಡಿನ ಹೊರತಾಗಿ ಕಣ್ಣೂರು, ಕಲ್ಲಿಕೋಟೆ, ವಯನಾಡು, ಮಲಪ್ಪುರಂ, ಪಾಲಕ್ಕಾಡ್ ಮತ್ತು ತೃಶೂರು ಎಂಬೀ ಏಳು ಜಿಲ್ಲೆಗಳ  ಒಟ್ಟು 604 ಸ್ಥಳೀಯಾಡಳಿತ ಸಂಸ್ಥೆಗಳಿಗೆ ದ್ವಿತೀಯ ಹಂತದಲ್ಲಿ ಇಂದು ಮತದಾನ ನಡೆಯುತ್ತಿದೆ. ಪ್ರಥಮ ಹಂತದಲ್ಲಿ ಉಳಿದ ಏಳು ಜಿಲ್ಲೆಗಳಿಗೆ  ಡಿ. 9ರಂದು ಚುನಾವಣೆ ನಡೆದಿತ್ತು. ಕಾಸರಗೋಡು  ಜಿಲ್ಲೆಯಲ್ಲಿ ಒಟ್ಟು 2855 ಅಭ್ಯರ್ಥಿಗಳು ನಗರಸಭೆ …

ಚುನಾವಣಾ ಕರ್ತವ್ಯಕ್ಕೆ ಮದ್ಯದಮಲಿನಲ್ಲಿ  ತಲುಪಿದ ಪೊಲೀಸ್ ಮಹಿಳಾ ಪ್ರಿಸೈಡಿಂಗ್ ಆಫೀಸರ್‌ರೊಂದಿಗೆ ಅನುಚಿತ ವರ್ತನೆ

ಕಾಸರಗೋಡು: ಮದ್ಯದಮಲಿನಲ್ಲಿ ಚುನಾವಣಾ ಕರ್ತವ್ಯಕ್ಕೆ ತಲುಪಿ ಮಹಿಳಾ ಪ್ರಿಸೈಂಡಿಂಗ್ ಆಫೀಸರ್‌ರೊಂ ದಿಗೆ ಅನುಚಿತವಾಗಿ ವರ್ತಿಸಿದ ಕಾಞಂಗಾಡ್ ಬೀಟಾ ಕಂಟ್ರೋಲ್ ರೂಂನ ಪೊಲೀಸ್‌ನ ವಿರುದ್ಧ ಆದೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಆದೂರು ಪೊಲೀಸ್ ಇನ್‌ಸ್ಪೆಕ್ಟರ್ ಎಂ.ವಿ. ವಿಷ್ಣುಪ್ರಸಾದ್‌ರ ದೂರಿ ನಂತೆ ಸಿಪಿಒ ಆಗಿರುವ ಸನೂಪ್ ಜೋನ್  ವಿರುದ್ಧ ಕೇಸು ದಾಖಲಿಸಲಾಗಿದೆ. ಮುಳಿಯಾರು ಪಂಚಾಯತ್‌ನ ಬೆಂಚ್ ಕೋರ್ಟ್ ವಾರ್ಡ್‌ನ ಮತಗಟ್ಟೆಯಾದ ಬೋವಿಕ್ಕಾನ ಎಯುಪಿ ಶಾಲೆಯಲ್ಲಿ  ನಿನ್ನೆ ಸಂಜೆ 4.30ರ ವೇಳೆ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಈ ಕುರಿತು ಆದೂರು …

ಮಾದಕದ್ರವ್ಯ ಸಹಿತ ಇಂಜಿನಿಯರ್ ಸೇರಿ ಮೂವರ ಬಂಧನ: ತಪ್ಪಿಸಿಕೊಳ್ಳಲು ಮಾದಕದ್ರವ್ಯ ನೀರಲ್ಲಿ ಮಿಶ್ರಣಗೊಳಿಸಿದ ಆರೋಪಿಗಳು

ಕಾಸರಗೋಡು: ಕಾಸರಗೋಡು ಅಬಕಾರಿ ತಂಡ ಪಳ್ಳಿಕ್ಕರೆ ಕಲ್ಲಿಂಗಾಲ್ ನಲ್ಲಿ ನಡೆಸಿದ ಕಾರ್ಯಾಚರ ಣೆಯಲ್ಲಿ ಮಾದಕದ್ರವ್ಯವಾದ 4.813 ಗ್ರಾಂ ಮೆಥಾಫಿಟಾಮಿನ್ ಹಾಗೂ ಮಾದಕ ದ್ರವ್ಯ ಮಿಶ್ರಣಗೊಳಿಸಿದ 618 ಗ್ರಾಂ ನೀರನ್ನು  ಪತ್ತೆಹಚ್ಚಿ ವಶಪಡಿಸಿಕೊಂ ಡಿದ್ದಾರೆ. ಇದಕ್ಕೆ ಸಂಬಂಧಿಸಿ ಚಟ್ಟಂಚಾಲ್ ಕುನ್ನಾರದ ಕೆ. ಅಬ್ಬಾಸ್ ಅರಾಫತ್ (26), ಮುಟ್ಟತ್ತೋಡಿ  ಸಂತೋಷ್‌ನಗರದ ಮೊಹಮ್ಮದ್  ಅಮೀನ್ (21) ಮತ್ತು ಪಳ್ಳಿಕ್ಕೆರೆ  ತೊಟ್ಟಿ ನಿವಾಸಿ ಟಿ.ಎಂ. ಫೈಸಲ್ (38) ಎಂಬ ವರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಇವರು ಬಳಸುತ್ತಿದ್ದ ಕಾರನ್ನು ಅಬಕಾರಿ ತಂಡ ವಶಕ್ಕೆ …

ವಿದ್ಯಾರ್ಥಿ ನಾಪತ್ತೆ

ಕಾಸರಗೋಡು: ಮಧೂರು ಪಟ್ಲ ನಿವಾಸಿ 17ರ ಹರೆ ಯದ ಯುವಕ ನಾಪತ್ತೆಯಾಗಿ ರುವುದಾಗಿ ದೂರಲಾ ಗಿದೆ. ಕುಂಬಳೆ ನಿವಾಸಿ ಮೊಹಮ್ಮದ್ ಅರಾಫತ್ ನಾಪತ್ತೆಯಾದ ಯುವಕ. ತ್ವಾಹಿರಿಯ ಅಕಾಡೆಮಿಯ ಪ್ಲಸ್ ವನ್ ವಿದ್ಯಾರ್ಥಿಯಾಗಿದ್ದಾನೆ. ಈತ ಶಾಲೆಯಿಂದ ಹೊರ ಹೋಗುವ ಸಿಸಿಟಿವಿ ದೃಶ್ಯಗಳು ಪೊಲೀಸರಿಗೆ ಲಭಿಸಿದೆ. ಕೆಂಪು ಟೀಶರ್ಟ್ ಧರಿಸಿರುವ ದೃಶ್ಯ ಲಭಿಸಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.